ಅನಾರೋಗ್ಯದ ನಡುವೆಯೂ ಬಜೆಟ್ ಮಂಡಿಸಿದ ಗೋವಾ ಸಿಎಂ ಪರಿಕ್ಕರ್... !

ಪಣಜಿ, ಜ.30: ಗೋವಾದ ಮುಖ್ಯ ಮಂತ್ರಿ ಮನೋಹರ್ ಪರಿಕ್ಕರ್ ಅಸೌಖ್ಯದ ನಡುವೆಯೂ ವಿಧಾನ ಸಭೆಯಲ್ಲಿ ಬಜೆಟ್ ಮಂಡಿಸಿ ತಮ್ಮ ಕರ್ತವ್ಯ ಪ್ರಜ್ಞೆಯನ್ನು ತೋರಿಸಿಕೊಟ್ಟಿದ್ದಾರೆ.
ತೀವ್ರ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗೋವಾ ಸಿಎಂ ಪರಿಕ್ಕರ್ ಹ್ಯಾಟ್ ಧರಿಸಿ, ಮೂಗಿಗೆ ಪೈಪ್ ಅಳವಡಿಸಿಕೊಂಡೇ ಸದನಕ್ಕೆ ಆಗಮಿಸಿದ್ದರು. ಕುರ್ಚಿಯಲ್ಲಿ ಕುಳಿತುಕೊಂಡೇ ಬಜೆಟ್ ಮಂಡಿಸಿದರು.
ಹಣಕಾಸು ಖಾತೆಯನ್ನು ನೋಡಿಕೊಳ್ಳುತ್ತಿರುವ ಪರಿಕ್ಕರ್ ಬಜೆಟ್ ನ ಪ್ರತಿಯನ್ನು ಓದಲು ಸಹಾಯ ಪಡೆದರು. ಭಾಷಣದ ಮಧ್ಯದಲ್ಲಿ ಸಿಬ್ಬಂದಿಯನ್ನು ಕರೆದು ನೀರು ತರಿಸಿಕೊಂಡರು. ನೀರು ಕುಡಿದು ಭಾಷಣ ಮುಂದುವರಿಸಿದರು.
ತನ್ನ ದೇಹದಲ್ಲಿ ಕೊನೆಯ ಉಸಿರು ಇರುವ ತನಕ ಗೋವಾದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ 63ರ ಹರೆಯದ ಪರಿಕ್ಕರ್ ಇದೇ ಸಂದರ್ಭದಲ್ಲಿ ರಾಜ್ಯದ ಜನೆತೆಗೆ ಭರವಸೆ ನೀಡಿದರು
Next Story





