ಶಿವಮೊಗ್ಗ: ರೌಡಿ ಶೀಟರ್ ಮಾರ್ಕೇಟ್ ಗೋವಿಂದ್ ಬರ್ಬರ ಹತ್ಯೆ

ಶಿವಮೊಗ್ಗ,ಜ.30: ರೌಡಿ ಶೀಟರ್ ಮಾರ್ಕೇಟ್ ಗೋವಿಂದ್ ರನ್ನು ಬರ್ಬರವಾಗಿ ಹತ್ಯೆಗೈದ ಘಟನೆ ಶಿವಮೊಗ್ಗದ ಗೌರವ್ ಲಾಡ್ಜ್ ಬಳಿ ಇಂದು ಸಂಜೆ 7:30 ರ ಸುಮಾರಿಗೆ ನಡೆದಿದೆ.
ರೌಡಿ ಶೀಟರ್ ಮಾರ್ಕೇಟ್ ಗೋವಿಂದ್ ಮಾರ್ಕೆಟ್ ಲೋಕಿಯ ಸಹೋದರನಾಗಿದ್ದು, ಇತ್ತೀಚೆಗಷ್ಟೇ ನಡೆದ ಮಾರ್ಕೆಟ್ ಗಿರಿಯ ಕೊಲೆಯ ನಂತರ ಇವರಿಬ್ಬರೂ ನಾಪತ್ತೆಯಾಗಿದ್ದರು ಎನ್ನಲಾಗಿದ್ದು, ಮಾರ್ಕೆಟ್ ಗಿರಿಯ ಕೊಲೆಗೈದ ಆರೋಪ ಇವರ ಮೇಲಿದೆ. ಅಲ್ಲದೇ ಗೋವಿಂದ್ ಮೇಲೆ ಮೂರು ಕೊಲೆ ಪ್ರಕರಣದಲ್ಲಿ ಕೋಕಾ ಕಾಯ್ದೆ ಜಾರಿಯಲ್ಲಿತ್ತು ಎನ್ನಲಾಗಿದೆ.
ಸ್ಥಳಕ್ಕೆ ದೊಡ್ಡಪೇಟೆ ಪೊಲೀಸ್ ಠಾಣೆ ಪೊಲೀಸರು ಆಗಮಿಸಿದ್ದು, ಪ್ರಕರಣ ದಾಖಲಾಗಿದೆ.
Next Story





