ಪೆ.1: ಎಲ್ಲೂರಿನಲ್ಲಿ ಸ್ವಲಾತ್ ಮಜ್ಲಿಸ್, ಧಾರ್ಮಿಕ ಶಿಬಿರ ಹಾಗೂ ಶಾದುಲಿಯ್ಯ ರಾತೀಬ್

ಉಡುಪಿ,ಜ.30: ಎಲ್ಲೂರು ದಾರುಲ್ ಅಮಾನ್ ಎಜುಕೇಶನಲ್ ಅಕಾಡೆಮಿ ವತಿಯಿಂದ ಮಾಸಿಕ ಸ್ವಲಾತ್ ಮಜ್ಲಿಸ್, ಧಾರ್ಮಿಕ ಶಿಬಿರ ಹಾಗೂ ಶಾದುಲಿಯ್ಯ ರಾತೀಬ್ ಪೆ.1 ರಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ.
ಅಲ್ ಹಾಜ್ ಸಲೀಂ ಮದನಿ ಕುತ್ತಾರು ಸ್ವಲಾತ್ ಮಜ್ಲಿಸ್ ಗೆ ನೇತೃತ್ವ ನೀಡಲಿದ್ದು, ಸ್ವಾದಿಕ್ ಸಖಾಫಿ ಉಳ್ಳಾಲ ಸಂದೇಶ ಭಾಷಣ ಮಾಡಲಿದ್ದಾರೆ. ಶಾದುಲಿಯ್ಯ ರಾತೀಬ್ ಗೆ ಪೊಯ್ಯತ್ತಬೈಲು ಮುದರ್ರಿಸ್ ಮಜೀದ್ ಉಸ್ತಾದ್ ನೇತೃತ್ವ ನೀಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story





