ಎಚ್-1ಬಿ ವೀಸಾ ಅರ್ಜಿಗಳ ವಿಲೇವಾರಿಗೆ ನೂತನ ವ್ಯವಸ್ಥೆ

ವಾಶಿಂಗ್ಟನ್, ಜ. 31: ಎಚ್-1ಬಿ ವೀಸಾ ಅರ್ಜಿಗಳ ವಿಲೇವಾರಿಗೆ ಎಪ್ರಿಲ್ ಒಂದರಿಂದ ನೂತನ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗುವುದು ಎಂದು ಅಮೆರಿಕ ಬುಧವಾರ ಘೋಷಿಸಿದೆ.
ನೂತನ ವ್ಯವಸ್ಥೆಯು ಭಾರತ, ಚೀನಾ ಹಾಗೂ ಇತರ ದೇಶಗಳಲ್ಲಿ ನೇಮಿಸಿಕೊಂಡ ವಿದೇಶಿಯರಿಗಿಂತ ಅಮೆರಿಕದ ಉನ್ನತ ಶಿಕ್ಷಣ ಸಂಸ್ಥೆಗಳಿಂದ ಉನ್ನತ ಪದವಿಗಳನ್ನು ಪಡೆದ ವಿದೇಶಿಯರಿಗೆ ಆದ್ಯತೆ ನೀಡುತ್ತದೆ.
ನೂತನ ವ್ಯವಸ್ಥೆಯು ಅರ್ಜಿಗಳ ಇಲೆಕ್ಟ್ರಾನಿಕ್ ನೋಂದಣಿಗೆ ಅವಕಾಶ ಮಾಡಿಕೊಡುತ್ತದೆ. ಆದಾಗ್ಯೂ, ಎಪ್ರಿಲ್ 1ರಿಂದ ಆರಂಭಗೊಳ್ಳುವ ಮುಂದಿನ ಎಚ್-1ಬಿ 2020 ಋತುವಿನಲ್ಲಿ ಈ ಸೌಲಭ್ಯವನ್ನು ಬಳಸಿಕೊಳ್ಳಲಾಗುವುದಿಲ್ಲ.
ನೂತನ ವ್ಯವಸ್ಥೆಯಡಿಯಲ್ಲಿ, ಅಮೆರಿಕದ ಸಂಸ್ಥೆಗಳಲ್ಲಿ ಉನ್ನತ ಪದವಿಗಳನ್ನು ಪಡೆದ ವಿದೇಶಿಯರ ನೇಮಕಾತಿಯಲ್ಲಿ 16 ಶೇಕಡ (5,340 ಉದ್ಯೋಗಿಗಳು) ಹೆಚ್ಚಳವಾಗುವುದೆಂದು ಅಂದಾಜಿಸಲಾಗಿದೆ.
Next Story





