ತೀರ್ಥಹಳ್ಳಿಯಲ್ಲಿ 5 ಮಂಗಗಳ ಕಳೇಬರ ಪತ್ತೆ: ಜನತೆ ಕಂಗಾಲು

ತೀರ್ಥಹಳ್ಳಿ, ಜ.31: ತಾಲೂಕಿನ ವಿವಿಧೆಡೆ 5 ಮಂಗಗಳ ಕಳೆಬರ ಪತ್ತೆಯಾಗಿದ್ದು ಜನಸಾಮಾನ್ಯರು ಆತಂಕಕ್ಕೊಳಗಾಗಿದ್ದಾರೆ.
ತಾಲೂಕಿನ ಹೊಸಬೀಡು ಗ್ರಾಮದಲ್ಲಿ 4 ಮಂಗಗಳು ಹಾಗೂ ಹಾರೋಗೊಳಿಗೆಯಲ್ಲಿ 1 ಮಂಗ ಮೃತಪಟ್ಟಿದ್ದು, ರೋಗ ಹರಡುವ ಭೀತಿಯಿಂದ ಗ್ರಾಮಸ್ಥರು ಮಂಗಗಳ ಮೃತ ಕಳೇಬರಗಳನ್ನು ದಫನ್ ಮಾಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಗ್ರಾಮಗಳಿಗೆ ಭೇಟಿ ನೀಡಿದ ಅರಣ್ಯ ಇಲಾಖೆಯ ಸಿಬ್ಬಂದಿ ಮಂಗಗಳ ಕಳೇಬರ ದಫನಮಾಡಲಾಗಿರುವ ಸ್ಥಳದಿಂದ ಕೆಲ ಮೀಟರ್‌ಗಳ ವರೆಗೆ ರೋಗನೀರೋಧಕ ದ್ರಾವಣಗಳನ್ನು ಸಿಂಪಡಿಸಿದ್ದಾರೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.
Next Story





