ಅಂತಿಮ ಜುಮ್ಲಾ: ಮಧ್ಯಂತರ ಬಜೆಟ್ ಬಗ್ಗೆ ರಾಜಕೀಯ ನಾಯಕರ ಪ್ರತಿಕ್ರಿಯಗಳು
ಚುನಾವಣಾ ಪ್ರಣಾಳಿಕೆ
ನಾನು ಇಂದಿನ ಬಜೆಟ್ ಅನ್ನು ಬಿಜೆಪಿಯ ಚುನಾವಣಾ ಪ್ರಣಾಳಿಕೆ ಎಂದು ಹೇಳುತ್ತೇನೆ. ಇದೆಲ್ಲವೂ ಮಾಡುತ್ತಿರುವುದು ಚುನಾವಣೆಗಾಗಿ. ಇದು ಮತದಾರರಿಗೆ ಲಂಚ ನೀಡುವುದು ಎಂದು ನಾನು ನೇರವಾಗಿ ಆರೋಪಿಸುತ್ತೇನೆ.
ಮಲ್ಲಿಕಾರ್ಜುನ ಖರ್ಗೆ, ಪ್ರತಿಪಕ್ಷದ ನಾಯಕ
---------------------------------------
ರೈತಪರ ಬಜೆಟ್
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ದೇಶಕ್ಕೆ ನೀಡಿದ ನೀತಿ ನಿರ್ದೇಶನದಲ್ಲಿ ಅತ್ಯುಚ್ಛ ಬಿಂದು ಎಂಬುದಾಗಿ ಈ ಮಧ್ಯಂತರ ಬಜೆಟ್ ಅನ್ನು ಹೇಳಬಹುದು. ಪ್ರಗತಿಪರ, ಆರ್ಥಿಕ ದೂರದೃಷ್ಟಿಯ, ರೈತಪರ, ಬಡವರ ಪರ ಹಾಗೂ ಭಾರತೀಯ ಮಧ್ಯಮ ವರ್ಗದವರ ಕೊಳ್ಳುವ ಸಾಮರ್ಥ್ಯ ಸಬಲಗೊಳಿಸಿದ ಪ್ರಶ್ನಾತೀತ ಬಜೆಟ್ ಇದು.
ಅರುಣ್ ಜೇಟ್ಲಿ, ಕೇಂದ್ರ ಸಚಿವ.
--------------------------------------
ಇದು ಅಭಿವೃದ್ಧಿ ಸ್ನೇಹಿ ಮಾತ್ರ ಅಲ್ಲ. ಬದಲಾಗಿ ನಮ್ಮ ಸಮಾಜದ ಮಧ್ಯಮವರ್ಗ, ರೈತರು, ಅಸಂಘಟಿತ ವಲಯದ ಕಾರ್ಮಿಕರು ಹಾಗೂ ಇತರ ದುರ್ಬಲವರ್ಗದವರ ಬಗ್ಗೆ ವಿಶೇಷ ಕಾಳಜಿ ವಹಿಸಿದೆ.
ರಾಜ್‌ನಾಥ್ ಸಿಂಗ್, ಕೇಂದ್ರ ಸಚಿವ
-----------------------------------------
ಎರಡನೇ ಸರ್ಜಿಕಲ್ ಸ್ಟ್ರೈಕ್ ಮೊದಲ ಸರ್ಜಿಕಲ್ ಸ್ಟೈಕ್ ಬಾರ್ಡರ್‌ನಲ್ಲಿ ನಡೆಯಿತು. ಯೋಧರು ಬುಲೆಟ್‌ನೊಂದಿಗೆ ಹೋರಾಡಿದರು ಇಲ್ಲಿ, ನಾವು ಬ್ಯಾಲೆಟ್‌ನೊಂದಿಗೆ ಹೋರಾಡಬೇಕಾಗಿದೆ. ಎನ್‌ಡಿಎ 400 ಸ್ಥಾನಗಳನ್ನು ಗೆಲ್ಲುವುದು ಹಾಗೂ ನರೇಂದ್ರ ಮೋದಿ ಮತ್ತೆ ಪ್ರಧಾನಿ ಆಗುವುದನ್ನು ಜನರು ನಿರ್ಧರಿಸಲಿದ್ದಾರೆ.
ರಾಮ್ ವಿಲಾಸ್ ಪಾಸ್ವಾನ್, ಕೇಂದ್ರ ಸಚಿವ, ಎಲ್‌ಜೆಪಿ ವರಿಷ್ಠ.
--------------------------
ಅಂತಿಮ ‘ಜುಮ್ಲಾ’
ಮೋದಿ ಸರಕಾರದ ಅಂತಿಮ ಜುಮ್ಲಾ: ಇದರ ಮಧ್ಯಂತರ ಬಜೆಟ್ ದಿಲ್ಲಿಗೆ ಸಂಪೂರ್ಣ ಹತಾಶೆ ಉಂಟು ಮಾಡಿದೆ. ಕೇಂದ್ರದ ತೆರಿಗೆಯಲ್ಲಿ ನಮ್ಮ ಪಾಲು 325 ಕೋಟಿ ರೂಪಾಯಿಯಲ್ಲಿ ನಿಂತಿದೆ. ಸ್ಥಳಿಯ ಸಂಸ್ಥೆಗಳಿಗೆ ಏನೊಂದು ನಿಗದಿ ಪಡಿಸಿಲ್ಲ. ದಿಲ್ಲಿ ತನ್ನ ಸ್ವಂತ ಹಣಕಾಸಿನಲ್ಲಿ ಮುಂದುವರಿಯುತ್ತಿದೆ.
ಅರವಿಂದ ಕೇಜ್ರಿವಾಲ್, ದಿಲ್ಲಿ ಮುಖ್ಯಮಂತ್ರಿ.
-------------------------------------------
ಅನುಷ್ಠಾನಗೊಳಿಸುವವರು ಯಾರು ?
ಇದನ್ನು ಯಾರು ಅನುಷ್ಠಾನಗೊಳಿಸುವುದು (ಮಧ್ಯಂತರ ಬಜೆಟ್) ? ಈ ಬಜೆಟ್ ಅನ್ನು ಅನುಷ್ಠಾನಗೊಳಿಸಲು ನೂತನ ಸರಕಾರ ಬರಬೇಕೇ ? ಮಧ್ಯಂತರ ಚುನಾವಣೆಗೆ ಮುನ್ನ ಮಧ್ಯಂತರ ಬಜೆಟ್ ಅನ್ನು ಮಂಡಿಸಲಾಗುತ್ತದೆ.
ಮಮತಾ ಬ್ಯಾನರ್ಜಿ, ಪಶ್ಚಿಬಂಗಾಳದ ಮುಖ್ಯಮಂತ್ರಿ
-------------------------------------
ರೈತರ ಜೀವನ ಛಿದ್ರ
ಐದು ವರ್ಷಗಳ ನಿಮ್ಮ ಅಸಮರ್ಥತೆ, ಧಾಷ್ಟ ನಮ್ಮ ರೈತರ ಜೀವನವನ್ನು ಛಿದ್ರಗೊಳಿಸಿದೆ.
ರಾಹುಲ್ ಗಾಂಧಿ, ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ
-----------------------------------
ಕಾರ್ಮಿಕರ ಪರ, ಬಡವರ ಪರ, ರೈತರ ಪರ, ಗ್ರಾಮಸ್ಥರ ಪರ ಹಾಗೂ ನಿಜವಾಗಿಯೂ ಸಾಮಾನ್ಯ ಜನರ ಪರ ಈ ಬಜೆಟ್ ! ಸಮಾಜದ ಕಟ್ಟಕಡೆಯ ವ್ಯಕ್ತಿ ಕೂಡ ಉತ್ತಮವಾಗಿ ಜೀವಿಸಲು ತೆಗೆದುಕೊಂಡ ಚಾರಿತ್ರಿಕ ನಿರ್ಧಾರದ ಸರಣಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ, ಪಿಯೂಷ್ ಗೋಯಲ್ ಜಿ ಅವರಿಗೆ ಧನ್ಯವಾದಗಳು.
ದೇವೇಂದ್ರ ಫಡ್ನವಿಸ್, ಮಹಾರಾಷ್ಟ್ರ ಸಿಎಂ
-------------------------------------
ಏನೆಂದು ಕರೆಯಲಿ
ನಾವು ಇದನ್ನು ಏನೆದು ಕರೆಯುವುದು ?, ಇನ್ನೊಂದು ಹುಸಿ ಭರವಸೆಯ ‘ಜುಮ್ಲಾ’ ?, 2019ರ ಚುನಾವಣೆಯಲ್ಲಿ ಪ್ರಸಕ್ತ ಸರಕಾರ ಸೋತರೆ ಏನು ಸಂಭವಿಸಬಹುದು. ? ಮೋದಿ ಜಿ ಹೇಳುವಂತೆ, ‘‘ನೀವು ಕೆಲವು ಜನರನ್ನು ಕೆಲವು ಸಂದರ್ಭ, ಕೆಲವು ಜನರನ್ನು ಎಲ್ಲ ಸಂದರ್ಭ ಮೂರ್ಖರನ್ನಾಗಿ ಮಾಡಬಹುದು. ಆದರೆ, ಎಲ್ಲಾ ಜನರನ್ನು ಎಲ್ಲಾ ಸಂದರ್ಭ ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲ’’
ದಿಗ್ವಿಜಯ ಸಿಂಗ್, ಕಾಂಗ್ರೆಸ್ ನಾಯಕ.
-----------------------------------------
‘ಸಬ್ಕಾ ಸಾಥ್ ಸಬ್ಕಾ ವಿಕಾಸ್’
ಗೌರವಾನ್ವಿತ ಪ್ರಧಾನಿ ಶ್ರೀ ನರೇಂದ್ರ ಮೋದಿ ಜಿ, ಶ್ರೀ ಅರುಣ್ ಜೇಟ್ಲಿ ಜಿ ಹಾಗೂ ಶ್ರೀ ಪಿಯೂಷ್ ಗೋಯಲ್ ಜಿಗೆ ಹಾರ್ದಿಕ ಅಭಿನಂದನೆಗಳು. ನಮ್ಮ ಯೋಜನೆಯಾದ ‘ಸಬ್ಕಾ ಸಾಥ್ ಸಬ್ಕಾ ವಿಕಾಸ್’ನಂತ ಸಮಾಜದ ಪ್ರತಿ ವರ್ಗದ ಅಭಿವೃದ್ಧಿಯನ್ನು ಈ ಬಜೆಟ್ ಹೊಂದಿದೆ.
ನಿತಿನ್ ಗಡ್ಕರಿ, ಬಿಜೆಪಿ ನಾಯಕ.