ಫೆ. 5: ಜಾರ್ಜ್ ಫೆರ್ನಾಂಡಿಸ್ ನೆನಪು
ಮಂಗಳೂರು, ಫೆ.1: ದೀಮಂತ ಹೋರಾಟಗಾರ, ಕೊಂಕಣ್ ರೈಲ್ವೆಯ ರೂವಾರಿ, ನೇರ ನಡೆ ನುಡಿಗಳ ರಾಜಕಾರಣಿ ದಿ.ಜಾರ್ಜ್ ಫೆರ್ನಾಂಡಿಸ್‌ರ ಆತ್ಮಕ್ಕೆ ಶಾಂತಿ ಕೋರಲು ಮಂಗಳೂರು ನಾಗರಿಕರ ಪರವಾಗಿ ಕೆಥೊಲಿಕ್ ಸಭಾ ಮಂಗಳೂರು ಪ್ರದೇಶ (ರಿ) ಫೆ.5ರಂದು ಸಂಜೆ 5:30ಕ್ಕೆ ನಗರದ ಬಿಜೈ ಚರ್ಚ್ ಸಭಾಂಗಣದಲ್ಲಿ ಸಾರ್ವಜನಿಕ ಶ್ರದ್ಧಾಂಜಲಿ ಸಭೆ ಹಮ್ಮಿಕೊಂಡಿವೆ.
ಮಂಗಳೂರು ಬಿಷಪ್ ಡಾ. ಪೀಟರ್ ಪಾವ್ಲ್ ಸಲ್ದಾನ್ಹ, ಕಟೀಲು ದೇವಸ್ಥಾನದ ಪ್ರಧಾನ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ,ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞಿ, ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ಮೇಯರ್ ಭಾಸ್ಕರ ಮೊಯ್ಲಿ, ಮುಖ್ಯಮಂತ್ರಿಯ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಮಂಗಳೂರು ಧರ್ಮಪ್ರಾಂತದ ಕೆಥೊಲಿಕ್ ಸಭಾ ಸಂಘಟನೆಯ ಅಧ್ಯಕ್ಷ ರೊಲ್ಫಿ ಡಿಕೊಸ್ತಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





