ಅಂಧ ವಿದ್ಯಾರ್ಥಿಯ ಸಾಧನೆ

ಮಂಗಳೂರು, ಫೆ.1 ಜನ್ಮತಃ ಅಂಧನಾಗಿದ್ದ ಬೆಂಗರೆ ಅಲ್ ಮದ್ರಸತುದ್ದೀನಿಯ್ಯ ಕೇಂದ್ರ ಮದ್ರಸದ ಏಳನೇ ತರಗತಿಯ ವಿದ್ಯಾರ್ಥಿ ಮಿಝಾಝ್ ಮಂಗಳೂರು ರೇಂಜ್ ವಿದ್ಯಾರ್ಥಿ ಫೆಸ್ಟ್‌ನಲ್ಲಿ ಸೀನಿಯರ್ ವಿಭಾಗದ ಬುರ್ದಾ ತಂಡದ ನಾಯಕನಾಗಿ ಮತ್ತು ಪಡಪ್ಪಾಟಿನಲ್ಲಿ ಬೆಂಗರೆ ಎ.ಎಂ.ಡಿ ಕೇಂದ್ರ ಮದ್ರಸವನ್ನು ಪ್ರತಿನಿಧಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಬೆಳ್ಳಾರೆಯಲ್ಲಿ ಫೆ.2 ಮತ್ತು 3ರಂದು ನಡೆಯುವ ಜಿಲ್ಲಾ ಮಟ್ಟದ ಕಲಾ ಮೇಳ ಸ್ಪರ್ಧೆಯಲ್ಲಿ ಇವರು ಮಂಗಳೂರು ರೇಂಜನ್ನು ಪ್ರತಿನಿಧಿಸಲಿದ್ದಾರೆ.
Next Story





