ಪ್ರತ್ಯೇಕ ಪ್ರಕರಣ: ಇಬ್ಬರ ಆತ್ಮಹತ್ಯೆ
ಬೈಂದೂರು, ಫೆ.1: ಹೇರೂರು ಗ್ರಾಮದ ಯರುಕೋಣೆ ಜನತಾ ಕಾಲನಿ ನಿವಾಸಿ ಪಂಜು ಪೂಜಾರಿ ಎಂಬವರ ಮಗ ನರಸಿಂಹ ಪೂಜಾರಿ(48) ಎಂಬವರು ಜ.30ರಂದು ರಾತ್ರಿ ವೇಳೆ ಮನೆ ಸಮೀಪದ ಹಾಡಿಯಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಣಿಪಾಲ: ಮಾನಸಿಕ ಖಿನ್ನತೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಜ.30ರಂದು ಬೆಳಗ್ಗೆ ಮನೆಯ ಹಾಲ್‌ನ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿ ತೀವ್ರ ಅಸ್ವಸ್ಥಗೊಂಡಿದ್ದ ಹೀರೆಬೆಟ್ಟು ಬಾಳ್ಕಟ್ಟ ನಿವಾಸಿ ಅಚ್ಚಣ್ಣ ಶೆಟ್ಟಿ ಎಂಬವರ ಮಗ ಸಂತೋಷ(30) ಎಂಬವರು ಫೆ.1ರಂದು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಮ ದಾಖಲಾಗಿದೆ.
Next Story





