ಬೋಟು ನಾಪತ್ತೆ: ಮುಳುಗು ತಜ್ಞರಿಂದ ಶೋಧ ?
ಉಡುಪಿ, ಫೆ.1: ಆಳ ಸಮುದ್ರದಲ್ಲಿ ಮುಳುಗಿ ನಾಪತ್ತೆಯಾಗಿದೆ ಎನ್ನಲಾದ ಸುವರ್ಣ ತ್ರಿಭುಜ ಬೋಟಿನ ಪತ್ತೆಗಾಗಿ ನೌಕಪಡೆಯು ಮುಳುಗು ತಜ್ಞರ ನೆರವಿನಲ್ಲಿ ಹುಡುಕಾಟ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಬೋಟು ಮುಳುಗಿಬಹುದೆಂದು ಶಂಕಿಸಲಾದ ಮುಂಬೈ ಸಮುದ್ರದಲ್ಲಿ ಪರಿ ಣಿತ ಮುಳುಗು ತಜ್ಞರು ಸುಮಾರು 35 ಮೀಟರ್ ಆಳದಲ್ಲಿ ಹುಡುಕಾಟ ನಡೆಸಿದ್ದು, ತಾಂತ್ರಿಕ ಅಡಚಣೆಯಿಂದ ಕಾರ್ಯಾಚರಣೆಯನ್ನು ಅರ್ಧಕ್ಕೆ ಮೊಟಕುಗೊಳಿಸಿರುವುದಾಗಿ ಪೊಲೀಸ್ ಮೂಲಗಳು ಹೇಳಿವೆ ಎಂದು ಮೀನುಗಾರ ಮುಖಂಡರು ತಿಳಿಸಿದ್ದಾರೆ
Next Story





