ಉಡುಪಿ: ನಾಲ್ಕು ಮಂಗಗಳ ಸಾವು
ಉಡುಪಿ, ಫೆ.1: ಉಡುಪಿ ಜಿಲ್ಲೆಯಲ್ಲಿ ಶುಕ್ರವಾರ ನಾಲ್ಕು ಮಂಗಗಳ ಕಳೇಬರಗಳು ಬಿದ್ಕಲ್‌ಕಟ್ಟೆ, ದೊಡ್ಡರಂಗಡಿ ಹಾಗೂ ಹೆಬ್ರಿ (2)ಗಳಲ್ಲಿ ಪತ್ತೆಯಾಗಿವೆ. ಇವುಗಳಲ್ಲಿ ದೊಡ್ಡರಂಗಡಿಯ ಮಂಗನ ಶವದ ಪೋಸ್ಟ್ ಮಾರ್ಟಂ ನಡೆಸಲಾಗಿದೆ. ಉಳಿದ ಮೂರು ಮಂಗಗಳ ದೇಹ ಕೊಳೆತು ಹೋಗಿತ್ತು ಎಂದು ಜಿಲ್ಲಾ ನೋಡೆಲ್ ಅಧಿಕಾರಿ ಡಾ. ಪ್ರಶಾಂತ್ ಭಟ್ ತಿಳಿಸಿದ್ದಾರೆ.
ಮಂಗನ ಕಾಯಿಲೆ ಕುರಿತಂತೆ ಮನೆ ಮನೆ ಸರ್ವೆ ಕಾರ್ಯ ಹಾಗೂ ಜನ ಜಾಗೃತಿ ಕಾರ್ಯಕ್ರಮಗಳು ಮುಂದುವರಿದಿವೆ. ಇಂದು ನಿಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ 80 ಮಂದಿಗೆ ಮಂಗನಕಾಯಿಲೆಯ ಲಸಿಕೆಯನ್ನು ಹಾಕಲಾಗಿದೆ ಎಂದು ಭಟ್ ತಿಳಿಸಿದರು.
Next Story





