ವಿದ್ಯಾರ್ಥಿ ಫೆಸ್ಟ್-2019: ಬೆಂಗರೆ ಮದ್ರಸ ಸತತ 8ನೇ ಬಾರಿಗೆ ಚಾಂಪಿಯನ್

ಮಂಗಳೂರು, ಫೆ.1: ಮಂಗಳೂರು ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ವತಿಯಿಂದ ಇತ್ತೀಚಿಗೆ ಜೋಕಟ್ಟೆಯಲ್ಲಿ ನಡೆದ ವಿದ್ಯಾರ್ಥಿ ಫೆಸ್ಟ್ 2019ರಲ್ಲಿ ಬೆಂಗರೆ ಅಲ್ ಮದ್ರಸತುದ್ದೀನಿಯ್ಯ ವಿದ್ಯಾರ್ಥಿಗಳು ಅತ್ಯಧಿಕ ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆಯುವ ಮೂಲಕ ಸತತ 8ನೇ ಬಾರಿ ಚಾಂಪಿಯನ್ ಶಿಪ್ ತನ್ನದಾಗಿಸಿಗೊಂಡಿದ್ದಾರೆ.
ಎರಡು ದಿನದಲ್ಲಿ 5 ವಿಭಾಗಗಳಾಗಿ ವಿವಿಧ ವಿಷಯಗಳಲ್ಲಿ ನಡೆದ ಸ್ಪರ್ಧೆಯಲ್ಲಿ ಅಧಿಕ ಅಂಕ ಪಡೆದು 8ನೇ ಬಾರಿ ಚಾಂಪಿಯನ್ ಶಿಪ್ ಪಡೆದ ವಿದ್ಯಾರ್ಥಿಗಳು ಮತ್ತು ಶ್ರಮಿಸಿದ ಅಧ್ಯಾಪಕರನ್ನು ಮಂಗಳೂರು ರೇಂಜ್ ಜಂಇಯ್ಯತುಲ್ ಮುಅಲ್ಲಿುೀನ್, ಮಂಗಳೂರು ರೇಂಜ್ ಮದ್ರಸ ಮ್ಯಾನೆಜ್‌ಮೆಂಟ್, ಬೆಂಗರೆ ಎಸ್‌ಕೆಎಸ್‌ಬಿ ಹಾಗೂ ಸ್ಟಾಫ್ ಕೌನ್ಸಿಲ್ ಅಭಿನಂದಿಸಿದೆ.
Next Story





