ದೇರಳಕಟ್ಟೆ: ಮೋರ್ ಸೂಪರ್ ಮಾರ್ಕೆಟ್‍ನಲ್ಲಿ ಬೆಂಕಿ ಅವಘಡ

ಉಳ್ಳಾಲ, ಫೆ. 1: ದೇರಳಕಟ್ಟೆಯಲ್ಲಿರುವ ಮೋರ್ ಸೂಪರ್ ಮಾರ್ಕೆಟ್‍ನಲ್ಲಿ ಗುರುವಾರ ತಡರಾತ್ರಿ ಶಾರ್ಟ್ ಸಕ್ರ್ಯೂಟ್‍ನಿಂದ ಬೆಂಕಿ ಅವಘಡ ನಡೆದ ಘಟನೆ ನಡೆದಿದೆ.
ಶಾರ್ಟ್ ಸಕ್ರ್ಯೂಟ್‍ನಿಂದಾಗಿ ಮಳಿಗೆಯಲ್ಲಿದ್ದ ಫ್ರೀಝರ್ ಸ್ಪೋಟಗೊಂಡಿದ್ದೇ ಅವಘಡಕ್ಕೆ ಕಾರಣ ಎನ್ನಲಾಗಿದೆ. ಘಟನೆಯಿಂದಾಗಿ ಮಳಿಗೆಯಿಡೀ ಹೊಗೆ ಆವರಿಸಿಕೊಂಡು ಇತರ ವ್ಯಾಪಾರ ವಸ್ತುಗಳಿಗೂ ಹಾನಿಯಾಗಿವೆ. ಶುಕ್ರವಾರ ಮಳಿಗೆಯ ಬಾಗಿಲು ತೆಗೆದಾಗ ಘಟನೆ ಬೆಳಕಿಗೆ ಬಂದಿದ್ದು, ಬಳಿಕ ಸ್ಥಳದಲ್ಲಿ ಜನ ಸೇರಿ ಕೆಲವು ಕ್ಷಣ ಆತಂಕದ ಸ್ಥಿತಿ ನಿರ್ಮಾಣವಾಗಿತ್ತು.
Next Story





