ಶಿವಮೊಗ್ಗ: 9 ಜನರಲ್ಲಿ ಶಂಕಿತ ಮಂಗನ ಕಾಯಿಲೆ- ಮಣಿಪಾಲ ಆಸ್ಪತ್ರೆಗೆ ದಾಖಲು

ಶಿವಮೊಗ್ಗ, ಫೆ.1: ಜಿಲ್ಲೆಯ ಸಾಗರ ತಾಲೂಕಿನ ಅರಲಗೋಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸದ್ಯಕ್ಕೆ ಮಂಗನ ಕಾಯಿಲೆ (ಕೆಎಫ್‍ಡಿ) ಮಹಾಮಾರಿಯ ಹಾವಳಿ ಕಡಿಮೆಯಾಗುವ ಲಕ್ಷಣಗಳು ಗೋಚರವಾಗುತ್ತಿಲ್ಲ. ಸುಮಾರು 9 ಜನರು ಶಂಕಿತ ಕೆಎಫ್‍ಡಿ ರೋಗಕ್ಕೆ ತುತ್ತಾಗಿದ್ದಾರೆ.
ವಾಟೇಮಕ್ಕಿ ಶಾಂತಿ, ಮರಬಿಡಿಯ ಸರಸ್ವತಿ, ಅರಲಗೋಡುವಿನ ಸುರೇಶ್ ಭಟ್, ಬಣ್ಣುಮನೆಯ ಗೌರಮ್ಮ, ನವೀನ್, ಜೇಗಳಿಯ ವಿಜಯಕುಮಾರ್, ಭವಿಷ್ಯತ್, ಮಂಡವಳ್ಳಿಯ ಗೌತಮ್ ಎಂಬುವರು ಶಂಕಿತ ಕೆಎಫ್‍ಡಿಯಿಂದ ಬಳಲುತ್ತಿದ್ದಾರೆ ಎಂದು ತಿಳಿದುಬಂದಿದೆ.
ಎಲ್ಲಾ ರೋಗಿಗಳಿಗೆ ಸ್ಥಳೀಯ ವೈದ್ಯರು ಪ್ರಾಥಮಿಕ ಚಿಕಿತ್ಸೆ ಕೊಡಿಸಿದ ನಂತರ, ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಲ್ಲರ ಆರೋಗ್ಯ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಸಾಗರದ ಆರೋಗ್ಯ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ.
Next Story





