ದೀರ್ಘಕಾಲದ ಗೆಳತಿಯನ್ನು ವರಿಸಲಿದ್ದಾರೆ ರಫೆಲ್ ನಡಾಲ್

ಮ್ಯಾಡ್ರಿಡ್, ಫೆ.1: ವಿಶ್ವದ ಮಾಜಿ ನಂ.1 ಆಟಗಾರ ರಫೆಲ್ ನಡಾಲ್ ತನ್ನ ದೀರ್ಘಕಾಲದ ಗೆಳತಿ ಮೇರಿ ಪೆರೆಲೊರನ್ನು ತನ್ನ ಬಾಳಸಂಗಾತಿಯನ್ನಾಗಿ ಮಾಡಿಕೊಳ್ಳಲು ಬಯಸಿದ್ದಾರೆ. ಇತ್ತೀಚೆಗೆ ಇವರಿಬ್ಬರ ನಡುವೆ ವಿವಾಹ ನಿಶ್ಚಿತಾರ್ಥ ನಡೆದಿತ್ತು.
32ರ ಹರೆಯದ ನಡಾಲ್ ಅವರು ಪೆರೆಲೊಗೆ ಮದುವೆ ಪ್ರಸ್ತಾವ ಇಟ್ಟಿದ್ದು ಇಬ್ಬರೂ ವಿವಾಹವಾಗಲಿದ್ದಾರೆ. ಈ ವಿಚಾರವನ್ನು ಎಟಿಪಿ ಟ್ವೀಟ್ ಮೂಲಕ ಖಚಿತಪಡಿಸಿದೆ.
ಇತ್ತೀಚೆಗೆ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಆಡಿದ್ದ ಸ್ಪೇನ್ ಆಟಗಾರ ನಡಾಲ್ ಫೈನಲ್‌ನಲ್ಲಿ ವಿಶ್ವದ ನಂ.1 ಆಟಗಾರ ನೊವಾಕ್ ಜೊಕೊವಿಕ್‌ಗೆ ಸೋತಿದ್ದರು.
ನಡಾಲ್ ಈ ತನಕ ಒಟ್ಟು 17 ಪ್ರತಿಷ್ಠಿತ ಗ್ರಾನ್‌ಸ್ಲಾಮ್ ಪ್ರಶಸ್ತಿಗಳನ್ನು ಜಯಿಸಿದ್ದಾರೆ. 8 ಬಾರಿ ರನ್ನರ್ಸ್ ಅಪ್ ಪ್ರಶಸ್ತಿ ಪಡೆದಿದ್ದಾರೆ. ‘ಕಿಂಗ್ಸ್ ಆಫ್ ಕ್ಲೇ’(ಆವೆಮಣ್ಣಿನ ರಾಜ)ಖ್ಯಾತಿಯ ನಡಾಲ್ ಫ್ರೆಂಚ್ ಓಪನ್‌ನಲ್ಲಿ ಒಟ್ಟು 14 ಪ್ರಶಸ್ತಿಗಳನ್ನು ಜಯಿಸಿದ್ದಾರೆ. ಇದು ಟೆನಿಸ್ ಇತಿಹಾಸದಲ್ಲಿ ಆಟಗಾರನೊಬ್ಬನ ಶ್ರೇಷ್ಠ ಸಾಧನೆಯಾಗಿದೆ.
Next Story





