ಕ್ಯಾಮೆರಾಮನ್ ಅನಿಲ್ ಜೋಗಿ ನಿಧನ

ಮಂಗಳೂರು, ಫೆ.1: ಸ್ಥಳೀಯ ಚಾನೆಲ್‌ನಲ್ಲಿ ಈ ಹಿಂದೆ ಕ್ಯಾಮೆರಾಮನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಅನಿಲ್ ಜೋಗಿ ಶುಕ್ರವಾರ ನಿಧನರಾದರು.
ಅವರು ಈ ಹಿಂದೆ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿ ಕೂಡ ಆಗಿದ್ದು ಸಂಘದ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. ಮೃತರಿಗೆ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ತೀವ್ರ ಸಂತಾಪ ವ್ಯಕ್ತಪಡಿಸಿದೆ.
Next Story





