ಇಂದು ಸಿಬಿಐಗೆ ಹೊಸ ನಿರ್ದೇಶಕರ ಆಯ್ಕೆ ಸಾಧ್ಯತೆ

ಹೊಸದಿಲ್ಲಿ, ಫೆ.2: ಸಿಬಿಐಗೆ ಹೊಸನಿರ್ದೇಶಕರ ಆಯ್ಕೆ ಶನಿವಾರ ನಡೆಯುವ ಸಾಧ್ಯತೆ ಇದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಮಿತಿಯು ಸಭೆ ಸೇರಿ ಸಿಬಿಐಗೆ ಹೊಸ ನಿರ್ದೇಶಕರನ್ನು ಆಯ್ಕೆ ಮಾಡಲಿದೆ.
ಸಿಬಿಐ ನಿರ್ದೇಶಕರ ಹುದ್ದೆಗೆ ಅಂತಿಮ ಪಟ್ಟಿಯಲ್ಲಿ 1983-84 ಬ್ಯಾಚ್ ನ 5 ಮಂದಿ ಹಿರಿಯ ಐಪಿಎಸ್ ಅಧಿಕಾರಿಗಳು ಇದ್ದಾರೆ.
ಮಧ್ಯಪ್ರದೇಶ ಮಾಜಿ ಡಿಜಿಪಿ ರಿಶಿ ಕುಮಾರ್ ಶುಕ್ಲಾ(1983 ಎಂಪಿ ಕೇಡರ್), ಸಿಆರ್ ಪಿಎಫ್ ಮುಖ್ಯಸ್ಥ ಆರ್ ಆರ್ ಭಟ್ನಾಗರ್ (1984 ಯುಪಿ), ಎನ್ ಎಸ್ ಸಿ ಮುಖ್ಯಸ್ಥ ಸುದೀಪ್ ಲಕ್ತಾಕಿಯಾ(1984 ಯುಪಿ), ಎನ್ ಐಸಿ & ಎಫ್ ಸಿ ನಿರ್ದೇಶಕ ಜಾವೇದ್ ಅಹ್ಮದ್ (1985 ಯುಪಿ) ಮತ್ತು ಬಿಪಿಆರ್ &ಡಿ ಮುಖ್ಯಸ್ಥ ಎ.ಪಿ.ಮಹೇಶ್ವರಿ (1984 ಯುಪಿ) ಸಿಬಿಐನ ಹುದ್ದೆಗೆ ಅಂತಿಮ ಪಟ್ಟಿಯಲ್ಲಿರುವ ಐಪಿಎಸ್ ಅಧಿಕಾರಿಗಳು.
1983 ರಿಂದ 85ರ ತನಕದ ಐಪಿಎಸ್ ಬ್ಯಾಚ್ ನ 80 ಅಧಿಕಾರಿಗಳ ಪಟ್ಟಿಯನ್ನು ಆಯ್ಕೆ ಮಾಡಲಾಗಿತ್ತು. ಈ ಪಟ್ಟಿಯಲ್ಲಿ 30 ಮಂದಿಯನ್ನು ಆಯ್ಕೆ ಮಾಡಿ, ಕೊನೆಗೆ ಐದು ಅಧಿಕಾರಿಗಳ ಅಂತಿಮ ಪಟ್ಟಿಯನ್ನು ತಯಾರಿಸಲಾಗಿದೆ.
Next Story