ರಿಷಿ ಕುಮಾರ್ ಶುಕ್ಲ ಸಿಬಿಐ ನೂತನ ನಿರ್ದೇಶಕ

ಹೊಸದಿಲ್ಲಿ, ಫೆ. 2 : ಹಿರಿಯ ಐಪಿಎಸ್ ಅಧಿಕಾರಿ ರಿಷಿ ಕುಮಾರ್ ಶುಕ್ಲ ಅವರನ್ನು ಮುಂದಿನ ಎರಡು ವರ್ಷಗಳ ಅವಧಿಗೆ ಸಿಬಿಐ ಮುಖ್ಯಸ್ಥರಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಯ್ಕೆ ಸಮಿತಿ ನೇಮಕ ಮಾಡಿದೆ.
1983 ರ ಬ್ಯಾಚ್ ನ ಐಪಿಎಸ್ ಅಧಿಕಾರಿ ರಿಷಿ ಕುಮಾರ್ ಶುಕ್ಲ ಮಧ್ಯಪ್ರದೇಶದ ಪೊಲೀಸ್ ಮಹಾ ನಿರೀಕ್ಷಕರಾಗಿ ಸೇವೆ ಸಲ್ಲಿಸಿದವರು. ವಿವಾದಗಳ ಕೇಂದ್ರವಾಗಿ ಇತ್ತೀಚಿಗೆ ಮಾರ್ಪಟ್ಟಿರುವ ಸಿಬಿಐ ಯಲ್ಲಿ ಹೊಸ ನಿರ್ದೇಶಕರಿಗೆ ಹಲವಾರು ಸವಾಲುಗಳಿವೆ.
Next Story