ಶೀಘ್ರವೇ ಎಲ್ಲ ಲೋಕಸಭಾ ಕ್ಷೇತ್ರಗಳಲ್ಲಿ ಪಾಸ್ಪೋರ್ಟ್ ಕೇಂದ್ರಗಳ ಸ್ಥಾಪನೆ: ಸಿನ್ಹಾ
ಅಲಹಾಬಾದ್,ಫೆ.2: ಹೆಚ್ಚುಕಡಿಮೆ ದೇಶದ ಎಲ್ಲ ಲೋಕಸಭಾ ಕ್ಷೇತ್ರಗಳಲ್ಲಿ ಪಾಸ್ಪೋರ್ಟ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಮತ್ತು ಈ ಸೌಲಭ್ಯವಿಲ್ಲದ ಕ್ಷೇತ್ರಗಳು ಶೀಘ್ರವೇ ಈ ಕೇಂದ್ರಗಳನ್ನು ಹೊಂದಲಿವೆ ಎಂದು ಕೇಂದ್ರದ ಸಹಾಯಕ ದೂರಸಂಪರ್ಕ ಸಚಿವ(ಸ್ವತಂತ್ರ ಹೊಣೆ) ಮನೋಜ ಸಿನ್ಹಾ ಅವರು ಶನಿವಾರ ಇಲ್ಲಿ ತಿಳಿಸಿದರು.
ಕುಂಭಮೇಳ ಸ್ಮರಣಾರ್ಥ ಅಂಚೆಚೀಟಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು,ಪಾಸ್ಪೋರ್ಟ್ ಪಡೆಯಲು ಯಾವುದೇ ಭಾರತೀಯರು 50 ಕಿ.ಮೀ.ಗಿಂತ ಹೆಚ್ಚು ಪ್ರಯಾಣಿಸಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬಯಸಿದ್ದಾರೆ ಎಂದರು.
2014ರವರೆಗೆ ದೇಶದಲ್ಲಿ 77 ಪಾಸ್ಪೋರ್ಟ್ ಕೇಂದ್ರಗಳಿದ್ದವು. ಆದರೆ ಅವುಗಳ ಸಂಖ್ಯೆ ಈಗ 300ನ್ನು ದಾಟಿದೆ. ಈವರೆಗೂ ಈ ಸೌಲಭ್ಯಗಳಿಲ್ಲದ ಕ್ಷೇತ್ರಗಳಲ್ಲಿ ಫೆಬ್ರವರಿ ಅಂತ್ಯದೊಳಗೆ ಪಾಸ್ಪೋರ್ಟ್ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದರು.
Next Story