ಅಗಸ್ಟಾ ವೆಸ್ಟ್ ಲ್ಯಾಂಡ್ ಹಗರಣ: ಖೇತಾನ್ ಕಸ್ಟಡಿ ವಿಸ್ತರಣೆ
ಹೊಸದಿಲ್ಲಿ, ಫೆ. 2: ಹಣ ವಂಚನೆ ಆರೋಪದಲ್ಲಿ ಅಗಸ್ಟಾ ವೆಸ್ಟ್ಲ್ಯಾಂಡ್ ಹಗರಣದ ಆರೋಪಿ ವಕೀಲ ಗೌತಮ್ ಖೇತಾನ್ ಅವರ ಜಾರಿ ನಿರ್ದೇನಾಲಯದ ಕಸ್ಟಡಿಯನ್ನು ದಿಲ್ಲಿ ನ್ಯಾಯಾಲಯ 6 ದಿನ ವಿಸ್ತರಿಸಿದೆ.
ಕಪ್ಪು ಹಣ ಹೊಂದಿರುವ ಹಾಗೂ ಹಣ ವಂಚನೆಯ ಹೊಸ ಪ್ರಕರಣಕ್ಕೆ ಸಂಬಂಧಿಸಿ ಅಗಸ್ಟಾ ವೆಸ್ಟ್ಲ್ಯಾಂಡ್ ಆರೋಪಿ ಯಾಗಿರುವ ಗೌತಮ್ ಖೇತಾನ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿತ್ತು. ಹಣ ವಂಚನೆ ತಡೆ ಕಾಯ್ದೆ ಅಡಿಯಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಜನವರಿ 25ರಂದು ಖೇತಾನ್ ಅವರನ್ನು ವಶಕ್ಕೆ ತೆಗೆದುಕೊಂಡಿದ್ದರು. ಆದಾಯ ತೆರಿಗೆ ಇಲಾಖೆ ಅವರ ವಿರುದ್ಧ ಜನವರಿ 26ರಂದು ದಾಖಲಿಸಿದ ಪ್ರಕರಣದ ಆಧಾರದಲ್ಲಿ ಖೇತಾನ್ ವಿರುದ್ಧ ಜಾರಿ ನಿರ್ದೇಶನಾಲಯ ಪಿಎಎಲ್ಎ ಅಡಿಯಲ್ಲಿ ಪ್ರಕರಣ ದಾಖಲಿಸಿತ್ತು.
Next Story