ಮೂಡಿಗೆರೆ: ಜಿಲ್ಲಾ ತುಳು ಸಮ್ಮೇಳನದಲ್ಲಿ ರಂಜಿಸಿದ ಸಾಂಸ್ಕೃತಿಕ ಕಾರ್ಯಕ್ರಮ

ಮೂಡಿಗೆರೆ, ಫೆ.3: ಕರ್ನಾಟಕ ತುಳು ಮತ್ತು ಬ್ಯಾರಿ ಸಾಹಿತ್ಯ ಅಕಾಡೆಮಿ ಸಹಯೋಗದೊಂದಿಗೆ ಮೂಡಿಗೆರೆ ತುಳು ಕೂಟದ ದಶಮಾನೋತ್ಸವದ ಅಂಗವಾಗಿ ಆಯೋಜಿಸಿದ್ದ ಎರಡು ದಿನದ ತುಳು ಸಾಹಿತ್ಯ ಸಮ್ಮೇಳನದಲ್ಲಿ ಶನಿವಾರ ಬೆಳಗ್ಗೆ ಮೂಡಿಗೆರೆಯ ಯಕ್ಷ ದಿ.ಡ್ಯಾನ್ಸರ್ಸ್ ಜನ್ನಾಪುರದ ನಾಟ್ಯ ಕಲಾ ಡ್ಯಾನ್ಸ್ ಇನ್ಸ್ ಟ್ಯೂಟ್ ಮೂಡಿಗೆರೆ ಮತ್ತು ಸಕಲೇಶಪುರದ ಕಲಾಭಾರತಿ ನೃತ್ಯ ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ನಾಟ್ಯ ಸ್ಪರ್ಧೆ ನಡೆಯಿತು.
ಬಳಿಕ ನಡೆದ ತುಳು ಗೋಷ್ಠಿಯಲ್ಲಿ ಮಂಗಳೂರಿನ ಡಾ.ಶಿವಶರಣ್ ಶೆಟ್ಟಿ ಮತ್ತು ತುಳು ವಿದ್ವಾಂಸ ಬಂಟ್ವಾಳದ ತುಕಾರಾಮ್ ಪೂಜಾರಿ ವಿಚಾರ ಮಂಡಿಸಿದರು. ಬಳಿಕ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯಿಂದ ಬ್ಯಾರಿ ಕವಿಗೋಷ್ಠಿ ನಡೆಯಿತು. ಇದರಲ್ಲಿ 7 ಮಂದಿ ಬ್ಯಾರಿ ಕವಿಗಳು ಭಾಗವಹಿಸಿದ್ದರು. ನಂತರ ಬ್ಯಾರಿ ಒಪ್ಪನೆ ಹಾಡು, ಬ್ಯಾರಿ ಆರ್ಕೇಸ್ಟ್ರಾ ಮತ್ತು ಮೂಡಿಗೆರೆ ಪಟ್ಟಣ, ಬಿಳಗುಳ, ಚಕಮಕ್ಕಿ ತಂಡದಿಂದ ದಫ್ ಕಾರ್ಯಕ್ರಮ ನಡೆಯಿತು. ಕೊಂಕಣಿ ಕಲಾವಿದರಿಂದ ಕೊಂಕಣಿ ನೃತ್ಯ ನೆರೆದಿದ್ದವರನ್ನು ಮನಸೂರೆಗೊಳಿಸಿತು.
ಉಡುಪಿ ಜಿಲ್ಲೆ ಕಾಪುವಿನ ಪ್ರಶಂಶ ತಂಡದಿಂದ ಬಲೆ ತೆಲಿಪುಲೆ ಹಾಸ್ಯಮಯ ಕಾರ್ಯಕ್ರಮ ನೆರೆದಿದ್ದವರನ್ನು ನಗೆಗಡಲಲ್ಲಿ ತೇಲಿಸಿತು. ನಿರಂತರವಾಗಿ ನಡೆದ ತುಳು ಕಾರ್ಯಕ್ರಮದಲ್ಲಿ ತುಳುಕೂಟದ ಅಧ್ಯಕ್ಷ ಅಶೋಕ್ ಎನ್.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬ್ಯಾರಿ ಸಾಹಿತ್ಯ ಅಕಾಡೆಮಿಯ ಕಾರ್ಯಕ್ರಮದಲ್ಲಿ ಅಧ್ಯಕ್ಷ ಕರಂಬಾರ್ ಮಹಮ್ಮದ್ ಅಧ್ಯಕ್ಷತೆ ವಹಿಸಿದ್ದರು.
ತುಳು ಅಕಾಡೆಮಿ ಅಧ್ಯಕ್ಷ ಎ.ಸ್.ಭಂಡಾರಿ, ರಿಜಿಸ್ಟ್ರಾರ್ ಚಂದ್ರಹಾಸ್ ರೈ, ಜಿಲ್ಲಾ ಬ್ಯಾರಿಗಳ ಒಕ್ಕೂಟದ ಅಧ್ಯಕ್ಷ ಸಿ.ಕೆ.ಇಬ್ರಾಹಿಂ, ತಾಲೂಕು ಅಧ್ಯಕ್ಷ ಎ.ಸಿ.ಅಯೂಬ್ ಹಾಜಿ, ರಾಜ್ಯ ಬ್ಯಾರಿ ಅಕಾಡೆಮಿ ಮಾಜಿ ಸದಸ್ಯ ಕಿರುಗುಂದ ಅಬ್ಬಾಸ್, ಮುಖಂಡರಾದ ವಸಂತ ಪೂಜಾರಿ, ರಾಘವ ಮುಡಿತಾಯ, ವಿಶ್ವಕುಮಾರ್, ವಿನೋದ್ ಕುಮಾರ್ ಶೆಟ್ಟಿ, ಡಾ, ಕೆ.ರಾಮಚರಣ್ ಅಡ್ಯಂತಾಯ, ಡಿ.ಎಲ್.ವಿಶ್ವನಾಥ್ ರೈ, ಡಿ.ಬಿ.ನರೇಂದ್ರಶೆಟ್ಟಿ, ಸುಂದರ್ ಬಿಳುಗುಳ, ಅತುಲ್ ರಾವ್, ರವಿಕುಮಾರ್, ರಮೇಶ್ ಆಚಾರ್ಯ, ಕೇಶವ ಸುವರ್ಣ, ಗಂಗಾಧರ್, ಐವಿಆರ್ ಪಿಂಟೋ, ಟಿ.ಹರೀಶ್, ವಿಮಲಾ ತೇಜಾಕ್ಷಿ, ಫಿಶ್ ಮೋಣು, ಬಿ.ಎಚ್.ಮಹಮ್ಮದ್ ಮತ್ತಿತರರಿದ್ದರು.








