ಸಮ್ಮಿಶ್ರ ಸರಕಾರ ಸುಭದ್ರವಾಗಿದೆ, ಬಜೆಪಿ ಹೇಳಿಕೆ ಆಧಾರಹಿತವಾದುದು: ಕೆ.ಸಿ. ವೇಣುಗೊಪಾಲ್

ಮಂಗಳೂರು, ಫೆ .3: ರಾಜ್ಯದಲ್ಲಿ ಸಮ್ಮಿ ಶ್ರ ಅಧಿಕಾರ ಕಳೆದುಕೊಳ್ಳುತ್ತದೆ ಎನ್ನುವ ಬಿಜೆಪಿ ಹೇಳಿಕೆಗೆ ಯಾವೂದೇ ಆಧಾರಗಳಿಲ್ಲ. ಕರ್ನಾಟಕದಲ್ಲಿ ಸಮ್ಮಿಶ್ರ ಸರಕಾರ ಸುಭದ್ರವಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೊಪಾಲ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ -ಜೆಡಿಎಸ್ ಸಮ್ಮಿಶ್ರ ಸರಕಾರ 8 ತಿಂಗಳು ಪೂರೈಸಿದೆ. ಮುಂದೆಯೂ ಇದೆ ರೀತಿಯ ಮೈತ್ರಿ ಐದು ವರ್ಷದವರೆಗೆ ಮುಂದುವರಿಯಲಿದೆ. ಬಿಜೆಪಿ ಹತಾಶರಾಗಿ ಈ ರೀತಿಯ ಹೇಳಿಕೆ ನೀಡುತ್ತಿದೆ. ಸಮ್ಮಿಶ್ರ ಸರಕಾರದ ಮೈತ್ರಿಗೆ ಧಕ್ಕೆ ಯಾಗುವ ಹೇಳಿಕೆಗಳನ್ನು ನೀಡುವವರ ವಿರುದ್ಧ ಪಕ್ಷದಿಂದ ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತದೆ. ಆದರೆ ಇದುವರೆಗೆ ಮೈತ್ರಿಗೆ ತಡಕಾಗುವ ಯಾವುದೆ ಘಟನೆಗಳು ನಡೆದಿಲ್ಲ. ಕೇಂದ್ರದ ಮೋದಿ ಹಾಗೂ ಅಮಿತ್ ಶಾ ನೇತೃತ್ವದ ಬಿಜೆಪಿ ರಾಜ್ಯದಲ್ಲಿಯೂ ಕೆಟ್ಟ ರಾಜಕೀಯ ಆಟದಲ್ಲಿ ತೊಡಗಿದೆ ಎಂದು ವೇಣುಗೋಪಾಲ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಮೈತ್ರಿ ಸರಕಾರಕ್ಕೆ ಮುಜುಗರವಾಗದಂತೆ ನಡೆದುಕೊಳ್ಳಲು ಪಕ್ಷದ ಶಾಸಕರಿಗೂ ಸೂಚನೆ ನಿಡಲಾಗಿದೆ ಎಂದು ವೇಣುಗೊಪಾಲ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಉಸ್ತುವಾರಿ ಸಚಿವ ಯು.ಟಿ.ಖಾದರ್, ಮಾಜಿ ಸಚಿವ ಬಿ.ರಮಾನಾಥ ರೈ, ಶಾಸಕ ಹಾಗೂ ಸಂಸದೀಯ ಕಾರ್ಯದರ್ಶಿ ಐವನ್ ಡಿ ಸೋಜ, ಶಾಸಕ ಹರೀಶ್ ಕುಮಾರ್, ಮಾಜಿ ಶಾಸಕ ಮೊಯ್ದಿನ್ ಬಾವ ಮೊದಲಾದವರು ಉಪಸ್ಥಿತರಿದ್ದರು.





