ಮಂಜನಾಡಿ: ಅಲ್ ಮದೀನಾದಲ್ಲಿ ಪ್ರವಾಸಿ ಸಂಗಮ
ಮಂಗಳೂರು, ಫೆ.3: ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್ ಮಂಜನಾಡಿ ಬೆಳ್ಳಿ ಹಬ್ಬದ ಪ್ರಯುಕ್ತ ಶನಿವಾರ ಅಲ್ ಮದೀನಾದಲ್ಲಿ ರಝಾಕ್ ಹಾಜಿ ಶಾರ್ಜಾ ಅವರ ಅಧ್ಯಕ್ಷತೆಯಲ್ಲಿ ಪ್ರವಾಸಿ ಸಂಗಮ ನಡೆಯಿತು.
ಪ್ರಾಸ್ತಾಕವಾಗಿ ಮಾತನಾಡಿದ ಶರಫುಲ್ ಉಲಮಾ ಶೈಖುನಾ ಅಬ್ಬಾಸ್ ಮುಸ್ಲಿಯಾರ್ ನಮ್ಮೂರಿನ ಸಾಕಷ್ಟು ಜನರು ದೇಶ-ವಿದೇಶದಲ್ಲಿ ಉದ್ಯಮ, ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದಾರೆ. ಗಳಿಸಿದ ಹಣದಲ್ಲಿ ಒಂದು ಭಾಗವನ್ನು ಸಂಘ ಸಂಸ್ಥೆಗಳಿಗೆ ನೀಡುತ್ತಿರುವುದು ಸ್ವಾಗತಾರ್ಹ ಎಂದರಲ್ಲದೆ, ಅಲ್ ಮದೀನಾದ ಸಮಿತಿಗಳಿಲ್ಲದ ಪ್ರದೇಶದಲ್ಲಿ ದ.ಕ.ಜಿಲ್ಲೆಯ ಅನಿವಾಸಿ ಭಾರತೀಯರನ್ನು ಸೇರಿಸಿ ಸಮಿತಿ ರಚಿಸಲು ಮುಂದಾಗಬೇಕು ಎಂದರು.
ಅಬೂಬಕರ್ ಹಾಜಿ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭ ಸೈಯದ್ ಇಸ್ಮಾಯೀಲ್ ಅಲ್ ಹಾದೀ ಉಜಿರೆ, ಅಬ್ದುಲ್ಲಾ ಹಾಜಿ ಚಿತ್ತಾರಿ ಅಬುಧಾಬಿ, ಮಜೀದ್ ಹಾಜಿ ಮುಂಬೈ, ಫಾರೂಕ್ ಅಬ್ಬಾಸ್ ಉಳ್ಳಾಲ್, ಮೊಯ್ದಿನ್ ಹಾಜಿ ಮೊಂಟೆಪದವು, ಮುಹಮ್ಮದ್ ರಫೀಕ್ ಅಬುಧಾಬಿ, ಇಸ್ಮಾಯೀಲ್, ಸಲೀಂ ಕನ್ಯಾಡಿ, ಟಿ.ಎಸ್. ಇಸ್ಮಾಯೀಲ್ ಮೊಂಟೆಪದವು ದಮ್ಮಾಮ್, ಉಸ್ಮಾನ್ ಝುಹ್‌ರಿ, ಇಕ್ಬಾಲ್ ಮಲ್ಲೂರು, ಅಬೂಬಕರ್ ಮದನಿ, ಬಸರಾ ಮೂಸಾ ಹಾಜಿ, ಉಸ್ಮಾನ್ ಮಂಜನಾಡಿ ದಮ್ಮಾಮ್, ಇಬ್ರಾಹೀಂ ಫೈಝಿ, ಉಮರ್ ಮುಸ್ಲಿಯಾರ್, ಅಬ್ದುಲ್ ಗನಿ ಉಳ್ಳಾಲ್, ಮೂಸಾ ಇಬ್ರಾಹೀಂ ಮೊಂಟೆಪದವು, ಶಾಹುಲ್ ಹಮೀದ್, ಕೆ.ಎಂ. ಇಲ್ಯಾಸ್ ಲತೀಫ್ ಮಂಜನಾಡಿ, ಸಿದ್ದೀಕ್ ಕರೋಪಾಡಿ, ಶೌಕತ್ ಕಿನ್ಯ, ಮುಹಮ್ಮದ್ ಕುಂಞಿ ಮೊಯ್ದಿನ್ ಮೋರ್ಲ, ಖಾಲಿದ್ ಪಡಿಕ್ಕಲ್, ಹಸನ್ ಕುಂಞಿ, ಇಬ್ರಾಹೀಂ ಮುಸ್ಲಿಯಾರ್, ಮುಹಮ್ಮದ್, ಮುಹಮ್ಮದ್ ಸಲೀಂ ಉಳ್ಳಾಲ್, ಮುಹಮ್ಮದ್ ಆಸೀಫ್,ಯೂಸುಫ್ ಕುತ್ತಾರ್, ಮದಕ ಮುಹಮ್ಮದ್ ಹಾಜಿ, ಮುಹಮ್ಮದ್ ಕುಂಞಿ ಮುಸ್ಲಿಯಾರ್ ಪಾಲ್ಗೊಂಡಿದ್ದರು.
ಅಲ್ ಮದೀನಾದ ಮ್ಯಾನೇಜರ್ ಅಬ್ದುಲ್ ಖಾದರ್ ಸಖಾಫಿ ಸ್ವಾಗತಿಸಿದರು. ಪನಿಯೂರ್ ಹುಸೈನ್ ಹಾಜಿ ದುಬೈ ವಂದಿಸಿದರು.







