ಮಂಗಳೂರು ವಿ.ವಿ ಮಟ್ಟದ ಅಂತರ್-ಕಾಲೇಜು ಮಹಿಳಾ ಕೋ-ಕೋ: ಆಳ್ವಾಸ್ ಚಾಂಪಿಯನ್

ಪುತ್ತೂರು, ಫೆ. 3: ಇಲ್ಲಿನ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ 2 ದಿನಗಳ ಕಾಲ ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್-ಕಾಲೇಜು ಮಹಿಳಾ ಕೋ-ಕೋ ಸ್ಪರ್ಧೆಯ ಚಾಂಪಿಯನ್ ಶಿಫ್ ವಿಭಾಗದಲ್ಲಿ ಮೂಡಬಿದ್ರೆ ಆಳ್ವಾಸ್ ಕಾಲೇಜು ಹಾಗೂ ಪ್ರಿಲಿಮಿನರಿ ವಿಭಾಗದಲ್ಲಿ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪ್ರಥಮ ಸ್ಥಾನ ಪಡೆದುಕೊಂಡಿರುತ್ತದೆ.
ಪಂದ್ಯಾಟವನ್ನು ಪ್ರಿಲಿಮಿನರಿ ಹಾಗೂ ಚಾಂಪಿಯನ್ ಶಿಪ್ ಎಂದು ಎರಡು ವಿಭಾಗದಲ್ಲಿ ನಡೆಸಲಾಗಿದ್ದು, ಒಟ್ಟು 12 ಕಾಲೇಜುಗಳ ತಂಡಗಳು ಭಾಗವಹಿಸಿದ್ದವು. ಪ್ರಿಲಿಮಿನರಿ ವಿಭಾಗದಲ್ಲಿ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು(ಪ್ರ) ವಿವೇಕಾನಂದ ಕಾಲೇಜು(ದ್ವಿ), ಸರಕಾರಿ ಪ್ರಥಮ ದರ್ಜೆ ಕಾಲೇಜು ಪುತ್ತೂರು (ತೃ), ಶ್ರೀರಾಮಕುಂಜೇಶ್ವರ ಕಾಲೇಜು ರಾಮಕುಂಜ(ತೃ) ಸ್ಥಾನವನ್ನು ಪಡೆದುಕೊಂಡಿದೆ. ಜಿಡೆಕಲ್ಲು ಪ್ರಥಮ ದರ್ಜೆ ಕಾಲೇಜಿನ ಅಕ್ಷತ ಅದ್ಬುತ ರಕ್ಷಣೆಗಾರ್ತಿ, ವಿವೇಕಾನಂದ ಕಾಲೇಜಿನ ರಕ್ಷಿತಾ ದಾಳಿಗಾರ್ತಿ ಹಾಗೂ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ರೇಷ್ಮಾ ಸರ್ವಾಂಗೀಣ ಆಟಗಾರ್ತಿಯಾಗಿ ಪ್ರಶಸ್ತಿಗಳನ್ನು ಪಡೆದುಕೊಂಡಿರುತ್ತಾರೆ.
ಚಾಂಪಿಯನ್ ಶಿಪ್ ವಿಭಾಗದಲ್ಲಿ ಮೂಡಬಿದರೆ ಆಳ್ವಾಸ್ ಕಾಲೇಜು (ಪ್ರ) ಮೂಡಬಿದರೆ ಆಳ್ವಾಸ್‍ನ ಬಿಪಿಎಡ್ ಕಾಲೇಜು(ದ್ವಿ), ಎಸ್‍ಡಿಎಂ ಕಾಲೇಜು ಉಜಿರೆ(ತೃ) ಹಾಗೂ ವಾಮದಪದವು ಸರಕಾರಿ ಪ್ರಥಮ ದರ್ಜೆ ಕಾಲೇಜು(ಚ) ಸ್ಥಾನವನ್ನು ಪಡೆದುಕೊಂಡಿದೆ. ಆಳ್ವಾಸ್ ಕಾಲೇಜಿನ ಸುಧಾ ಅದ್ಬುತ ರಕ್ಷಣಾಗಾರ್ತಿ, ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸುಭಾಷಿಣಿ ಉತ್ತಮ ದಾಳಿಗಾರ್ತಿ ಹಾಗೂ ಆಳ್ವಾಸ್ ಬಿಪಿಎಡ್ ಕಾಲೇಜಿನ ದೀಕ್ಷಾ ಸರ್ವಾಂಗೀಣ ಆಟಗಾರ್ತಿಯಾಗಿ ಬಹುಮಾನವನ್ನು ಪಡೆದುಕೊಂಡಿರುತ್ತಾರೆ.





