ಮಂಜನಾಡಿ: ಅಲ್ ಮದೀನಾದಲ್ಲಿ ಸೌಹಾರ್ದ ಸಂಗಮ

ಮಂಗಳೂರು, ಫೆ.3: ಮಂಜನಾಡಿಯ ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್‌ನ ಬೆಳ್ಳಿ ಹಬ್ಬದ ಪ್ರಯುಕ್ತ ಅಲ್ ಮದೀನಾದ ಸಾರಥಿ ಶರಫುಲ್ ಉಲಮಾ ಪಿ.ಎಂ.ಅಬ್ಬಾಸ್ ಮುಸ್ಲಿಯಾರ್ ಅಧ್ಯಕ್ಷತೆಯಲ್ಲಿ ರವಿವಾರ ಸೌಹಾರ್ದ ಸಂಗಮ ಜರುಗಿತು.
ಸೈಯದ್ ಕೆ.ಎಸ್.ಆಟಕ್ಕೋಯ ತಂಙಳ್ ಕುಂಬೋಳ್ ದುಆಗೈದು ಆಶೀರ್ವಚನ ನೀಡಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಹಝ್ರತ್ ಮುಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ, ಸೂಫಿ ಫೆಡರೇಶನ್ ಆಫ್ ಇಂಡಿಯಾದ ಪ್ರಧಾನ ಕಾರ್ಯದರ್ಶಿ ಸೈಯದ್ ಬಾಬರ್ ಅಶ್ರಫ್ ಕಿಚೌಚ್ವಿ, ದ.ಕ.ಜಿಪಂ ಸದಸ್ಯ ಎಂ.ಎಸ್. ಮುಹಮ್ಮದ್, ಕಾಂಗ್ರೆಸ್ ಮುಖಂಡರಾದ ಜಲೀಲ್ ಮೋಂಟುಗೋಳಿ, ಪದ್ಮನಾಭ ನರಿಂಗಾನ, ಸಾಮಾಜಿಕ ನಾಯಕರಾದ ಮಜೀದ್ ಹಾಜಿ ಉಚ್ಚಿಲ, ಇಬ್ರಾಹೀಂ ಹಾಜಿ ಜಿದ್ದಾ, ಪಟ್ಟಾಂಬಿ ಅಬೂ ಝಿಯಾದ್ ಉಸ್ತಾದ್, ಅಬ್ದುಲ್ ರಹ್ಮಾನ್ ಬಹ್‌ರೈನ್,ಎ.ಟು. ಝಡ್ ಗ್ರೂಫ್‌ನ ಮಹಮ್ಮದ್ ಮನ್ಸೂರು, ತಸ್ಲೀಲ್ ಬೆಂಗಳೂರು, ಆಲಿಕುಂಞಿ ಪಾರೆ, ಸಿತಾರ್ ಹಾಜಿ, ಹಸನ್ ಹಾಜಿ ಸಾಂಬಾರ್‌ತೋಟ, ಸಾಲೆತ್ತೂರು ಅಬ್ದುಲ್ ಖಾದರ್, ಮಹ್ಮೂದ್ ಉಸ್ತಾದ್, ಮುಹಮ್ಮದ್ ಹಾಜಿ ಉಪಸ್ಥಿತರಿದ್ದರು.
ಮುನೀರ್ ಸಖಾಫಿ ಸ್ವಾಗತಿಸಿದರು. ಕೆಎಂಕೆ ಮಂಜನಾಡಿ ವಂದಿಸಿದರು.





