ಮಾದಕ ವಸ್ತು ಮಾರಾಟ: ಯುವರಿಬ್ಬರ ಸೆರೆ
ಬೆಂಗಳೂರು, ಫೆ.3: ಮಾದಕ ವಸ್ತು ಗಾಂಜಾ ಮಾರಾಟ ಆರೋಪದಡಿ ಯುವಕರಿಬ್ಬರನ್ನು ಇಲ್ಲಿನ ಬನಶಂಕರಿ ಠಾಣಾ ಪೊಲೀಸರು ಬಂಧಿಸಿದ್ದಾರೆ.
ನಗರದ ನಿವಾಸಿಗಳಾದ ಆದಿತ್ಯ(21), ಅಭಿಷೇಕ್ ಸಿಂಗ್ (24) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಬನಶಂಕರಿಯ 2ನೆ ಹಂತದ ಮಹೇಶ್ವರಮ್ಮ ದೇವಸ್ಥಾನದ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದರು ಎಂಬ ಮಾಹಿತಿ ಮೇರೆಗೆ ಬನಶಂಕರಿ ಪೊಲೀಸರು ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿದೆ ಎನ್ನಲಾಗಿದೆ.
ಆರೋಪಿಗಳಿಂದ 1ಕೆಜಿ ಗಾಂಜಾ, 3 ಸಾವಿರ ರೂ. ನಗದು ವಶ ಪಡಿಸಿಕೊಂಡು, ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Next Story





