ಶ್ರೀಲಂಕಾಗೆ ಭಾರೀ ಸವಾಲು: ಎರಡನೇ ಟೆಸ್ಟ್ ಪಂದ್ಯ

ಖ್ವಾಜಾ ಶತಕ
ಕ್ಯಾನ್‌ಬೆರಾ, ಫೆ.3: ಕೊನೆಗೂ ಲಯಕ್ಕೆ ಮರಳಿದ ಉಸ್ಮಾನ್ ಖ್ವಾಜಾ ಅವರ ಅಮೋಘ ಶತಕದ ನೆರವಿನಿಂದ ಆಸ್ಟ್ರೇಲಿಯ ತಂಡ 2ನೇ ಟೆಸ್ಟ್‌ನಲ್ಲಿ ಶ್ರೀಲಂಕಾ ಗೆಲುವಿಗೆ 516 ರನ್‌ಗಳ ಕಠಿಣ ಗುರಿ ನೀಡಲು ಯಶಸ್ವಿಯಾಗಿದೆ. ಭಾರೀ ಸವಾಲು ಸ್ವೀಕರಿಸಿರುವ ಸಿಂಹಳೀಯರು ಮೂರನೇ ದಿನದಾಟ ಅಂತ್ಯಗೊಂಡ ವೇಳೆ ವಿಕೆಟ್ ನಷ್ಟವಿಲ್ಲದೆ 17 ರನ್ ಗಳಿಸಿದ್ದಾರೆ.
ಪ್ರಥಮ ಇನಿಂಗ್ಸ್‌ನಲ್ಲಿ 534 ರನ್ ಗಳಿಸಿದ್ದ ಆಸ್ಟ್ರೇಲಿಯ ತಂಡ ಶ್ರೀಲಂಕಾವನ್ನು 215 ರನ್‌ಗಳಿಗೆ ನಿಯಂತ್ರಿಸಿತು. ಆತಿಥೇಯ ತಂಡದ ಪರ ವೇಗಿ ಮಿಚೆಲ್ ಸ್ಟಾರ್ಕ್ 5 ವಿಕೆಟ್ ಉರುಳಿಸುವಲ್ಲಿ ಯಶಸ್ವಿಯಾದರು.
319 ರನ್‌ಗಳ ಭಾರೀ ಮುನ್ನಡೆ ಪಡೆದ ಕಾಂಗರೂ ಪಡೆ ದ್ವಿತೀಯ ಇನಿಂಗ್ಸ್‌ನಲ್ಲಿ 3 ವಿಕೆಟ್ ನಷ್ಟಕ್ಕೆ 196 ರನ್ ಗಳಿಸಿದ ವೇಳೆ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಭಾರತದ ವಿರುದ್ಧ ಸರಣಿಯ ವೇಳೆ ಲಯ ಕಳೆದುಕೊಂಡಿದ್ದ ಖ್ವಾಜಾ ಶತಕ (ಅಜೇಯ 101)ಬಾರಿಸುವ ಮೂಲಕ ಆಸೀಸ್‌ನ ಭಾರೀ ಮುನ್ನಡೆಗೆ ನೆರವಾದರು. ಟ್ರಾವಿಸ್ ಹೆಡ್ ಅರ್ಧಶತಕ (ಅಜೇಯ 59) ಸಿಡಿಸಿ ಕಾಣಿಕೆ ನೀಡಿದರು. ಭಾರೀ ಗುರಿ ಬೆನ್ನಟ್ಟಿರುವ ಶ್ರೀಲಂಕಾ ತಂಡದ ಲಹಿರು ತಿರಿಮನೆ ್ನ(8) ಹಾಗೂ ದಿಮುತ್ ಕರುಣರತ್ನೆ (8) ಕ್ರೀಸ್‌ನಲ್ಲಿದ್ದಾರೆ. ಇನ್ನೂ 2 ದಿನಗಳ ಆಟ ಬಾಕಿಯಿದ್ದು 499 ರನ್ ಗಳಿಸುವತ್ತ ಲಂಕಾ ದಾಂಡಿಗರು ಮುನ್ನುಗ್ಗಬೇಕಿದೆ.







