ಕಿವೀಸ್ ಪ್ರವಾಸಕ್ಕೆ ತಸ್ಕಿನ್ ಅಹ್ಮದ್ ಅಲಭ್ಯ
ಢಾಕಾ, ಫೆ.3: ಪಾದದ ನೋವಿಗೆ ಒಳಗಾಗಿರುವ ಬಾಂಗ್ಲಾದೇಶದ ವೇಗಿ ತಸ್ಕಿನ್ ಅಹ್ಮದ್ ಮುಂಬರುವ ಕಿವೀಸ್ ಪ್ರವಾಸವನ್ನು ತಪ್ಪಿಸಿಕೊಂಡಿದ್ದಾರೆ.
ಬಾಂಗ್ಲಾದೇಶ ಪ್ರೀಮಿಯರ್ ಲೀಗ್‌ನಲ್ಲಿ ತೋರಿದ ಉತ್ತಮ ಪ್ರದರ್ಶನದ ಕಾರಣ ನ್ಯೂಝಿಲೆಂಡ್ ವಿರುದ್ಧ ಪ್ರಕಟಿಸಲಾದ ಏಕದಿನ ಹಾಗೂ ಟೆಸ್ಟ್ ತಂಡದಲ್ಲಿ ಅವರು ಸ್ಥಾನ ಪಡೆದಿದ್ದರು. ‘‘ತಸ್ಕಿನ್ ಎಡಗಾಲು ಪಾದದ ಗಾಯಕ್ಕೆ ಒಳಗಾಗಿದ್ದು, ಮೂರು ವಾರಗಳ ವಿಶ್ರಾಂತಿ ಅಗತ್ಯವಿದೆ. ಆ ಬಳಿಕ ಅವರ ಸ್ಥಿತಿ ಸುಧಾರಿಸಲಿದೆ. ನ್ಯೂಝಿಲೆಂಡ್ ಪ್ರವಾಸದಿಂದ ಅವರು ದೂರ ಉಳಿಯುವುದು ಖಚಿತ’’ ಎಂದು ಬಾಂಗ್ಲಾ ಕ್ರಿಕೆಟ್ ಮಂಡಳಿಯ ವೈದ್ಯ ದೇಬಶಿಶ್ ಚೌಧರಿ ತಿಳಿಸಿದ್ದಾರೆ. ಫೆ.13ರಿಂದ ಮಾರ್ಚ್ 20ರ ವರೆಗೆ ಬಾಂಗ್ಲಾದೇಶ ತಂಡ ಕಿವೀಸ್ ವಿರುದ್ಧ ಅದರದೇ ನೆಲದಲ್ಲಿ ಮೂರು ಏಕದಿನ ಹಾಗೂ 3 ಟೆಸ್ಟ್ ಪಂದ್ಯಗಳನ್ನು ಆಡಲಿದೆ.
Next Story





