ನವ ಮಂಗಳೂರು ಬಂದರಿಗೆ ಸಿಂಗಾಪುರದ ಸರಕು ಸಾಗಾಟ ನೌಕೆ
ಮಂಗಳೂರು, ಫೆ .4: ನವ ಮಂಗಳೂರು ಬಂದರಿಗೆ ಸಿಂಗಾಪುರದ ಸರಕು ಸಾಗಾಟ ನೌಕೆ 228 ಮೀಟರ್ ಉದ್ದದ ಎಂ.ಟಿ.ಸಿಯೋಲ್ ಡಿ ಹೋಸ್ಟನ್ ಫೆ.2ರಂದು ತಲುಪಿದೆ. ಬಳಿಕ ಎಂಆರ್‌ಪಿಎಲ್‌ನಿಂದ ಸಿಂಗಾಪುರಕ್ಕೆ ರಫ್ತಿಗೆ ಸಿದ್ಧವಾಗಿದ್ದ 65,000 ಟನ್ ಹೈಸ್ಪೀಡ್ ಡೀಸೆಲನ್ನು ತುಂಬಿಕೊಂಡು ಮಂಗಳೂರು ಬಂದರಿನಿಂದ ಫೆ. 3ರಂದು ನಿರ್ಗಮಿಸಿದೆ.
ಈ ಸಂದರ್ಭದಲ್ಲಿ ಎನ್‌ಎಂಪಿಟಿ ಅಧ್ಯಕ್ಷ ಕೃಷ್ಣಬಾಬು ಸಿಂಗಾಪುರದ ಎಂ.ಟಿ.ಸಿಯೋಲ್ ಡಿ ಹೋಸ್ಟನ್ ನೌಕೆಯ ಕ್ಯಾಪ್ಟನ್ ಶೌಕತ್ ಅಲಿಯನ್ನು ಸ್ವಾಗತಿಸಿ ಬಿಳ್ಕೋಟ್ಟರು. ಐಒಎಸ್‌ನ ಪ್ರತಿನಿಧಿ ಪ್ರಶಾಂತ್, ಎನ್‌ಎಂಪಿಟಿ ಮುಖ್ಯ ಟ್ರಾಫಿಕ್ ಮ್ಯಾನೇಜರ್ ವೈ.ಆರ್.ಬೆಳಗಲಿ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
Next Story





