ಸೆ.6ರಿಂದ ಮುಂಡ್ಕೂರು ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶಾಭಿಷೇಕ
ಮುಂಡ್ಕೂರು (ಬೆಳ್ಮಣ್ಣು), ಫೆ. 4: ಸುಮಾರು 1,200 ವರ್ಷಗಳ ಇತಿಹಾಸ ಹೊಂದಿರುವ ಕಾರ್ಕಳ ತಾಲೂಕಿನ ಮುಂಡ್ಕೂರು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಅಷ್ಟಬಂಧ, ಸಹಸ್ರ ಕಲಶ ಸಹಿತ ಬ್ರಹ್ಮಕಲಶಾಭಿಷೇಕ ಮಹೋತ್ಸವ ಫೆ.6ರಿಂದ ಆರಂಭಗೊಂಡು 11ರವರೆಗೆ ನಡೆಯಲಿದೆ. ಆ ಬಳಿಕ ಫೆ.13ರಿಂದ 20ರವರೆಗೆ ವಾರ್ಷಿಕ ಮಹೋತ್ಸವ ನಡೆಯಲಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸಾಂತ್ರಾಲಗುತ್ತು ಎಂ.ವಾದಿರಾಜ ಶೆಟ್ಟಿ ತಿಳಿಸಿದ್ದಾರೆ.
ದೇವಸ್ಥಾನದಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಬ್ರಹ್ಮಕಲಶಾಭಿಷೇಕದ ವಿವರಗಳನ್ನು ನೀಡಿ ಮಾತನಾಡಿದ ಅವರು, ಸುಮಾರು 3.5 ಕೋಟಿರೂ. ವೆಚ್ಚದಲ್ಲಿ ನಡೆದಿರುವ ವಿವಿಧ ಕಾಮಗಾರಿಗಳ ಸಹಿತ ನವೀಕರಗೊಂಡ ಶ್ರೀ ದುರ್ಗಾಪರಮೇಶ್ವರಿ ದೇಗುಲದಲ್ಲಿ ಅಷ್ಟಬಂಧ ಸಹಸ್ರ ಕಲಶ ಸಹಿತ ಬ್ರಹ್ಮಕಲಶಾಭಿಷೇಕ ಫೆ.11ರಂದು ಬೆಳಗ್ಗೆ 8:40ಕ್ಕೆ ನ ಡೆಯಲಿದೆ ಎಂದು ಅವರು ತಿಳಿಸಿದರು.
ದೇವಸ್ಥಾನದಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಬ್ರಹ್ಮಕಲಶಾಭಿಷೇಕದ ವಿವರಗಳನ್ನು ನೀಡಿ ಮಾತನಾಡಿದ ಅವರು, ಸುಮಾರು 3.5 ಕೋಟಿರೂ. ವೆಚ್ಚದಲ್ಲಿ ನಡೆದಿರುವ ವಿವಿಕಾಮಗಾರಿಗಳಸಹಿತನವೀಕರಗೊಂಡಶ್ರೀದುರ್ಗಾಪರಮೇಶ್ವರಿದೇಗುಲದಲ್ಲಿಅಷ್ಟಬಂ ಸಹಸ್ರ ಕಲಶ ಸಹಿತ ಬ್ರಹ್ಮಕಲಶಾಭಿಷೇಕ ಫೆ.11ರಂದು ಬೆಳಗ್ಗೆ 8:40ಕ್ಕೆ ನಡೆಯಲಿದೆ ಎಂದು ಅವರು ತಿಳಿಸಿದರು. ಫೆ.6ರಿಂದ ಬ್ರಹ್ಮಕಲಶೋತ್ಸವದ ಪ್ರಕ್ರಿಯೆಗಳಿಗೆ ಚಾಲನೆ ದೊರೆಯಲಿದೆ. ಈ ಸಂದರ್ಭದಲ್ಲಿ ಕ್ಷೇತ್ರದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಪ್ರತಿ ದಿನ ಸಂಜೆ 6ರಿಂದ ಶ್ರೀದುರ್ಗಾ ವೇದಿಕೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಫೆ.9ರಂದು ಸಂಜೆ 6ಕ್ಕೆ ವಾದಿರಾಜ ಕಲಾ ಮಂದಿರ ಉದ್ಘಾಟನೆಗೊಳ್ಳಲಿದೆ. 10ರಂದು ಸಂಜೆ ವಿವಿಧ ಕಟ್ಟಡಗಳು ಉದ್ಘಾಟನೆಗೊಳ್ಳಲಿವೆ. ಪ್ರತಿದಿನ ಸಂಜೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು- ಭಕ್ತಿ ಸಂಗೀತ, ತುಳು ನಾಟಕಗಳು, ಯಕ್ಷಗಾನ, ಯಕ್ಷ-ಗಾನ-ನಾಟ್ಯ-ವೈಭವ- ಆಯೋಜಿಸಲಾಗಿದೆ. ಫೆ.11ರ ಸೋಮವಾರ ಮುಂಜಾನೆ 5ರಿಂದ ಬ್ರಹ್ಮಕಲಶಾಭಿಷೇಕ ಕಾರ್ಯ ಕ್ರಮಗಳು ಆರಂಭಗೊಂಡು 8:40 ಬ್ರಹ್ಮಕಲಶಾಭಿಷೇಕ ನಡೆಯಲಿದೆ ಎಂದು ಎಂ.ವಾದಿರಾಜ ಶೆಟ್ಟಿ ತಿಳಿಸಿದರು.
ಫೆ.13ರಿಂದ ವಾರ್ಷಿಕ ಮಹೋತ್ಸವ ಪ್ರಾರಂಭಗೊಳ್ಳಲಿದ್ದು, 18ರಂದು ಸೋಮವಾರ ರಾತ್ರಿ 11:30ಕ್ಕೆ ಬ್ರಹ್ಮರಥೋತ್ಸವ ನಡೆಯಲಿದೆ ಎಂದವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಸುರೇಂದ್ರ ಎಸ್.ಶೆಟ್ಟಿ, ಕೃಷ್ಣ ಪೂಜಾರಿ, ಸಂಜೀವ ಕರ್ಕೇರ, ಅಶೋಕ ಶೆಟ್ಟಿ, ಮೇಲ್ವಿಚಾರಣೆ ಸಮಿತಿಯ ಸ್ವರಾಜ್ ಶೆಟ್ಟಿ, ಅರುಣ್ ರಾವ್, ಶೇಖರ ಶೆಟ್ಟಿ ಮಾಣಿಬೆಟ್ಟು, ಶರತ್ ಶೆಟ್ಟಿ ದೊಡ್ಡಮನೆ ಉಪಸ್ಥಿತರಿದ್ದರು.







