ವಿಶ್ವ ಕ್ಯಾನ್ಸರ್ ದಿನದಂದು ಆಸ್ಪತ್ರೆಯಿಂದ ಸಂದೇಶ ಕಳುಹಿಸಿದ ಪಾರಿಕ್ಕರ್
ಹೊಸದಿಲ್ಲಿ,ಫೆ.4: ಮೇದೋಜ್ಜೀರಕ ಗ್ರಂಥಿಯ ಕಾಯಿಲೆಯಿಂದಾಗಿ ದಿಲ್ಲಿಯ ಏಮ್ಸ್‌ಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಗೋವಾ ಮುಖ್ಯಮಂತ್ರಿ ಮನೋಹರ ಪಾರಿಕ್ಕರ್ ಅವರು ವಿಶ್ವ ಕ್ಯಾನ್ಸರ್ ದಿನವಾದ ಸೋಮವಾರ ‘ಮಾನವ ಮನಸ್ಸು ಮಾಡಿದರೆ ಯಾವುದೇ ಕಾಯಿಲೆಯನ್ನು ಮೆಟ್ಟಿ ನಿಲ್ಲಬಲ್ಲ ’ಎಂದು ಟ್ವೀಟಿಸಿದ್ದಾರೆ.
ವಿಶ್ವ ಕ್ಯಾನ್ಸರ್ ದಿನದ ಹ್ಯಾಷ್‌ಟ್ಯಾಗ್‌ನೊಂದಿಗೆ ಅವರು ಮಾಡಿರುವ ಟ್ವೀಟ್‌ನ್ನು 1,900 ಟ್ವೀಟಿಗರು ಹಂಚಿಕೊಂಡಿದ್ದು,7,400ಕ್ಕೂ ಅಧಿಕ ಲೈಕ್‌ಗಳನ್ನು ಪಡೆದಿದೆ.
63ರ ಹರೆಯದ ಪಾರಿಕ್ಕರ್ ಅವರನ್ನು ಕಳೆದ ಗುರುವಾರ ಏಮ್ಸ್‌ಗೆ ದಾಖಲಿಸಲಾಗಿದ್ದು, ಅವರ ದೇಹಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದರು.
ಪಾರಿಕ್ಕರ್ ಅವರು ಕಳೆದ ಒಂದು ವರ್ಷದಿಂದಲೂ ಅನಾರೋಗ್ಯದಿಂದ ಬಳಲುತ್ತಿದ್ದಾರೆ.
Next Story