ಶ್ರೀಲಂಕಾದ ದೇಶೀಯ ಕ್ರಿಕೆಟ್‌ನಲ್ಲಿ ಅಪರೂಪದ ದ್ವಿಶತಕ ದಾಖಲಿಸಿದ ಆ್ಯಂಜೆಲೊ ಪೆರೇರ

ಕೊಲಂಬೊ, ಫೆ.4: ಶ್ರೀಲಂಕಾ ದಾಂಡಿಗ ಹಾಗೂ ನಾಂಡೆಸ್ಕ್ರಿಪ್ಟ್ ಕ್ರಿಕೆಟ್ ಕ್ಲಬ್ ನಾಯಕ ಆ್ಯಂಜೆಲೊ ಪೆರೇರ ದೇಶೀಯ ಕ್ರಿಕೆಟ್‌ನಲ್ಲಿ ಟೆಸ್ಟ್ ಪಂದ್ಯವೊಂದರಲ್ಲಿ ಎಂಟು ದಶಕಗಳ ಬಳಿಕ ಎರಡು ದ್ವಿಶತಕ ದಾಖಲಿಸಿದ ವಿಶ್ವದ ಎರಡನೇ ಕ್ರಿಕೆಟಿಗ ಎಂಬ ಅಪರೂಪದ ಸಾಧನೆ ಮಾಡಿದ್ದಾರೆ. ಶ್ರೀಲಂಕಾದ ಪ್ರೀಮಿಯರ್ ಲೀಗ್ ಟೂರ್ನಿಯಲ್ಲ್ಲಿ ಪೆರೇರ ಈ ಸಾಧನೆ ಮಾಡಿದ್ದಾರೆ. 1938ರಲ್ಲಿ ಕೆಂಟ್ ಬ್ಯಾಟ್ಸ್ ಮನ್ ಅರ್ಥರ್ ಫಾಗ್ ಎಸ್ಸೆಕ್ಸ್ ಕ್ರಿಕೆಟ್ ಕ್ಲಬ್ ವಿರುದ್ಧ ಪಂದ್ಯವೊಂದರಲ್ಲಿ 244 ಹಾಗೂ ಔಟಾಗದೆ 202 ರನ್ ಗಳಿಸಿದ್ದರು.
ಇದೀಗ ಸುಮಾರು 80 ವರ್ಷಗಳ ಬಳಿಕ ಪೆರೇರ ಈ ಸಾಧನೆ ಮಾಡಿದ ಮೊದಲ ದಾಂಡಿಗ ಎನಿಸಿಕೊಂಡಿದ್ದು, ಎನ್‌ಸಿಸಿ ತಂಡದ ಪರ ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್ ವಿರುದ್ಧ 201 ಹಾಗೂ 231 ರನ್ ಗಳಿಸಿದ್ದಾರೆ. ಪೆರೇರ ಮಾಜಿ ಟೆಸ್ಟ್ ಆಟಗಾರರಾದ ಧಮ್ಮಿಕಾ ಪ್ರಸಾದ್ ಹಾಗೂ ಸಚಿತ್ರಾ ಸೇನನಾಯಕೆ ಬೌಲಿಂಗ್‌ನ್ನು ದಿಟ್ಟವಾಗಿ ಎದುರಿಸಿ ಈ ಸಾಧನೆ ಮಾಡಿದ್ದಾರೆ. ಶ್ರೀಲಂಕಾದ ಪ್ರೀಮಿಯರ್ ಲೀಗ್ ಟೂರ್ನಮೆಂಟ್‌ನಲ್ಲಿ ಈ ಋತುವಿನಲ್ಲಿ ಒಟ್ಟು 14 ದ್ವಿಶತಕ ದಾಖಲಾಗಿವೆ. ಕೌಶಲ್ ಸಿಲ್ವಾ ಸರ್ವಾಧಿಕ ಸ್ಕೋರ್(274 ರನ್)ಗಳಿಸಿದ್ದಾರೆ.
ಅಪರೂಪದ ಸಾಧನೆ ಮಾಡಿರುವ ಪೆರೇರ ರಾಷ್ಟ್ರೀಯ ತಂಡದಲ್ಲಿ ಮತ್ತೊಮ್ಮೆ ಸ್ಥಾನ ಪಡೆಯುವ ಪ್ರಬಲ ಸ್ಪರ್ಧಿಯಾಗಿದ್ದಾರೆ. ಪೆರೇರ 2013 ಹಾಗೂ 2016ರ ಮಧ್ಯೆ 4 ಏಕದಿನ ಹಾಗೂ 2 ಟಿ-20 ಪಂದ್ಯಗಳನ್ನು ಆಡಿದ್ದಾರೆ.
ಪೆರೇರ ಅವರ ಸಾಹಸದ ಹೊರತಾಗಿಯೂ ಎನ್‌ಸಿಸಿ ತಂಡ ಸಿಂಹಳೀಸ್ ವಿರು್ಧ್ದ 194 ರನ್‌ಗಳಿಂದ ಸೋಲುಂಡಿದೆ.







