ಹರ್ಯಾಣ ಮಹಿಳೆಯರಿಗೆ ಏಳು ಬಂಗಾರ ಪದಕ
ಸೂರತ್, ಫೆ.4: ರಾಷ್ಟ್ರೀಯ ಕಿರಿಯರ ಕುಸ್ತಿ ಚಾಂಪಿಯನ್‌ಶಿಪ್‌ನ ಫ್ರೀಸ್ಟೈಲ್ ವಿಭಾಗದಲ್ಲಿ ಹರ್ಯಾಣದ ಮಹಿಳೆಯರು ರವಿವಾರ ರಾತ್ರಿ 7 ಚಿನ್ನದ ಪದಕಗಳನ್ನು ಬಾಚಿಕೊಂಡು ಪಾರಮ್ಯ ಮೆರೆದಿದ್ದಾರೆ.
ಇಲ್ಲಿ ನಡೆದ ಪಂದ್ಯಾವಳಿಯ ಒಟ್ಟು 10 ತೂಕ ವಿಭಾಗದಲ್ಲಿ 7 ಪದಕಗಳನ್ನು ಹರ್ಯಾಣ ಮಹಿಳೆಯರು ತಮ್ಮದಾಗಿಸಿಕೊಂಡರು. ಅಂಜು (53 ಕೆ.ಜಿ.), ಪ್ರಿಯಾಂಕಾ (57 ಕೆ.ಜಿ.), ಅಂಜಲಿ (59 ಕೆ.ಜಿ.), ಟೀನಾ (65 ಕೆ.ಜಿ.), ಸೋನಿಕಾ ಹೂಡಾ (68 ಕೆ.ಜಿ.), ನಿಶಾ (72 ಕೆ.ಜಿ.), ಕರುಣಾ (76 ಕೆ.ಜಿ.) ತಮ್ಮ ವಿಭಾಗಗಳಲ್ಲಿ ಬಂಗಾರದ ಪದಕ ಮುಡಿಗೇರಿಸಿಕೊಂಡವರು.
ಉತ್ತರಪ್ರದೇಶ ತಂಡದ ನೀಲಮ್ (50 ಕೆ.ಜಿ.) ಹಾಗೂ ಅರ್ಜುನ್ ಥೋಮರ್(55 ಕೆ.ಜಿ.) ಮೂಲಕ 2 ಚಿನ್ನದ ಪದಕ ಗೆದ್ದರೆ, ಮಧ್ಯಪ್ರದೇಶದ ಅಪೂರ್ವ (62 ಕೆ.ಜಿ.) ಮತ್ತೊಂದು ವಿಭಾಗದಲ್ಲಿ ಮತ್ತೊಂದು ಬಂಗಾರ ಜಯಿಸಿದರು.
Next Story





