ಆರ್‌ಸಿಬಿ ಶಿಬಿರದಲ್ಲಿ ಸ್ಥಳೀಯ ಕ್ರಿಕೆಟಿಗರಿಗೆ ಯೊಯೊ ಟೆಸ್ಟ್
ಬೆಂಗಳೂರು, ಫೆ.4: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 5 ದಿನಗಳ ಕಂಡೀಶನಿಂಗ್ ಶಿಬಿರವನ್ನು ತನ್ನ 8 ಸ್ಥಳೀಯ ಕ್ರಿಕೆಟಿಗರೊಂದಿಗೆ ಪ್ರಾಥಮಿಕವಾಗಿ ಆರಂಭಿಸಿದೆ. ಈ 8 ರಲ್ಲಿ ಬಂಗಾಳದ 16 ವರ್ಷದ ಪ್ರಯಾಸ್ ರಾಯ್ ಬರ್ಮರ್ ಹಾಗೂ ರಣಜಿ ಟ್ರೋಫಿಯ ಗರಿಷ್ಠ ರನ್ ಸ್ಕೋರರ್ ಮಿಲಿಂದ್‌ಕುಮಾರ್ ಸೇರಿದ್ದಾರೆ.
8 ಆಟಗಾರರು ಈಗಾಗಲೇ ಶಿಬಿರದಲ್ಲಿದ್ದು, ಉತ್ತರಪ್ರದೇಶ ರಣಜಿ ತಂಡದ ನಾಯಕ ಆಕಾಶ್‌ದೀಪ್ ನಾಥ್, ಮುಂಬೈ ಆಲ್‌ರೌಂಡರ್ ಶಿವಂ ದುಬೆ, ದಿಲ್ಲಿಯ ಚಾಣಾಕ್ಷ ದಾಂಡಿಗ ಹಿಮ್ಮತ್ ಸಿಂಗ್ ಹಾಗೂ ವೇಗಿ ಕುಲವಂತ್ ಕೆಜ್ರೊಲಿಯ. ಕರ್ನಾಟಕದ ದೇವದತ್ತ್ ಪಡಿಕ್ಕಲ್ ಹಾಗೂ ತಮಿಳುನಾಡಿನ ವಾಶಿಂಗ್ಟನ್ ಸುಂದರ್ ಇದರಲ್ಲಿ ಸೇರಿದ್ದಾರೆ. ತಂಡದ ಇಬ್ಬರು ತರಬೇತುದಾರರಾದ ಗ್ಯಾರಿ ಕರ್ಸ್ಟನ್ ಹಾಗೂ ಆಶೀಶ್ ನೆಹ್ರಾ ಆಟಗಾರರ ಪ್ರಗತಿಯನ್ನು ಪರಿಶೀಲಿಸುತ್ತಿದ್ದಾರೆ. ಅಲ್ಲದೆ ಫಿಟ್ನೆಸ್‌ನ್ನು ಕಾಪಾಡಿಕೊಳ್ಳಲು ಯೊಯೊ ಟೆಸ್ಟ್‌ನ್ನು ಆಯೋಜಿಸಲಾಗುತ್ತದೆ.
Next Story





