ಮುಹಮ್ಮದ್ ಶಮಿ ಬೆನ್ನುತಟ್ಟಿದ ರವಿ ಶಾಸ್ತ್ರಿ
ವೆಲ್ಲಿಂಗ್ಟನ್, ಫೆ.4: ನ್ಯೂಝಿಲೆಂಡ್ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತಕ್ಕೆ 4-1 ಅಂತರದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿರುವ ವೇಗದ ಬೌಲರ್ ಮುಹಮ್ಮದ್ ಶಮಿ ಅವರನ್ನು ಭಾರತದ ಮುಖ್ಯ ಕೋಚ್ ರವಿ ಶಾಸ್ತ್ರಿ ಶ್ಲಾಘಿಸಿದ್ದಾರೆ. ವರ್ಷದ ಹಿಂದೆ ಯೋ-ಯೋ ಫಿಟ್ನೆಸ್ ಟೆಸ್ಟ್‌ನಲ್ಲಿ ಅನುತ್ತೀರ್ಣರಾಗಿದ್ದ ಶಮಿ ಅವರ ವೈಯಕ್ತಿಕ ಜೀವನವೂ ಅಸ್ತವ್ಯಸ್ತವಾಗಿತ್ತು. ಈ ಎಲ್ಲವನ್ನೂ ಮೆಟ್ಟಿನಿಂತ ಕೋಲ್ಕತಾದ ಬೌಲರ್ ಶಮಿ 2018ರಲ್ಲಿ ದಕ್ಷಿಣ ಆಫ್ರಿಕ, ಇಂಗ್ಲೆಂಡ್, ಆಸ್ಟ್ರೇಲಿಯ ಹಾಗೂ ನ್ಯೂಝಿಲೆಂಡ್‌ನಲ್ಲಿ ಆಡಿದ ವಿದೇಶಿ ಸರಣಿಯಲ್ಲಿ ಒಟ್ಟು 61 ವಿಕೆಟ್‌ಗಳನ್ನು ಉರುಳಿಸಿ ಗಮನ ಸೆಳೆದಿದ್ದಾರೆ.‘‘ಕಳೆದ ಐದು ತಿಂಗಳಿಂದ ಓರ್ವ ಆಟಗಾರ ಅತ್ಯಮೋಘ ಪ್ರದರ್ಶನ ನೀಡುತ್ತಿದ್ದಾರೆ. ಅವರೇ ಮುಹಮ್ಮದ್ ಶಮಿ. ಯೋ-ಯೋ ಟೆಸ್ಟ್‌ನಲ್ಲಿ ಫೇಲಾದ ಬಳಿಕ ಭರ್ಜರಿ ಪುನರಾಗಮನ ಮಾಡಿರುವ ಅವರು ಎಲ್ಲ ಮಾದರಿ ಕ್ರಿಕೆಟ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದಾರೆ’’ಎಂದು ಶಾಸ್ತ್ರಿ ಹೇಳಿದ್ದಾರೆ.
Next Story





