ವ್ಯಾಪಾರಿಯ ಅಪಹರಿಸಿ ಹತ್ಯೆಗೈದ ಪ್ರಕರಣ: ಆರು ಆರೋಪಿಗಳ ಬಂಧನ

ಮೈಸೂರು,ಫೆ.4: ಹಣಕ್ಕಾಗಿ ಅಡುಗೆ ಎಣ್ಣೆ ವ್ಯಾಪಾರಿಯನ್ನು ಅಪಹರಿಸಿ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬನ್ನೂರು ಪೊಲೀಸರು ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಆರು ಮಂದಿ ಆರೊಪಿಗಳಾದ ಶ್ರೀಧರ, ಮಂಜುನಾಥ್, ಮಂಜು, ಇಮ್ರಾನ್ ಪಾಶ ಹಾಗೂ ಸಂತೋಷ ಬಂಧನಕ್ಕೊಳಗಾದವರು. ಇವರಿಂದ ಕೃತ್ಯಕ್ಕೆ ಬಳಸಿದ ಒಂದು ಕಾರು, ಒಂದು ಸ್ಕೂಟರ್ ಹಾಗೂ 7 ಮೊಬೈಲ್ ಜೊತೆಗೆ 1 ಲಕ್ಷದ 54 ಸಾವಿರ ರೂಪಾಯಿ ಹಣವನ್ನು ವಶಪಡಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಮೈಸೂರು ನಗರದ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆ ವ್ಯಾಪಾರಿಯಾದ ಸಂದಿಲ್ ಎಂಬಾತನ ಬಳಿ ಹಣವಿದೆ ಎಂದು ನಗರೆ ಹೊರವಲಯದಿಂದ ಈತನನ್ನು ಅಪಹರಿಸಿದ ಅಪಹರಣಕಾರರು, ಈತನ ಬಿಡುಗಡೆಗಾಗಿ 25 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಕೊನೆಗೆ ಅಪಹರಣದ ಬಗ್ಗೆ ಪೊಲೀಸರಿಗೆ ಸುಳಿವು ಸಿಕ್ಕರೆ ತೊಂದರೆಗೆ ಸಿಕ್ಕಿಕೊಳ್ಳುತ್ತೇವೆ ಎಂದು ಅರಿತ ಅಪಹರಣಕಾರರು, 2.25 ಲಕ್ಷ ಹಣ ಪಡೆದು ಸೆಂದಿಲ್‍ನನ್ನು ಕೊಲೆ ಮಾಡಿ ನಾಲೆಗೆ ಬಿಸಾಕಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ.
ಈ ಸಂಬಂಧ ಪೊಲೀಸರು ವಿಚಾರಣೆ ಕೈಗೊಂಡಿದ್ದು ಆರೋಪಿಗಳಿಂದ ಇನ್ನಷ್ಟು ಮಾಹಿತಿಯನ್ನು ಪಡೆಯುತ್ತಿದ್ದಾರೆ.





