ಹೆಜಮಾಡಿ: ನವಯುಗ ಕಂಪನಿ ಟೋಲ್ ವಿರುದ್ಧ ಹೋರಾಟ, ಮುಲ್ಕಿ ಬಂದ್'ಗೆ ಜೆಡಿಎಸ್ ಬೆಂಬಲ

ಹೆಜಮಾಡಿ, ಫೆ. 5: ಮುಲ್ಕಿ ಅಭಿವೃದ್ಧಿ ನಾಗರಿಕ ಸಮಿತಿ ಇದರ ಸಹಯೋಗದಲ್ಲಿ ನವಯುಗ ಕಂಪನಿ ಟೋಲ್ ವಿರುದ್ಧ ನಡೆದ ಮುಲ್ಕಿ ಬಂದ್ ಮತ್ತು ಪಾದಯಾತ್ರೆಗೆ ಜೆಡಿಎಸ್ ದ.ಕ. ಜಿಲ್ಲೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ, ಪ್ರತಿಭಟನೆಯಲ್ಲಿ ಭಾಗವಹಿಸಿತು.
ಪ್ರತಿಭಟನೆಯಲ್ಲಿ ಜೆಡಿಎಸ್ ನಾಯಕರಾದ ಮಾಜಿ ಸಚಿವ ಶ್ರೀ.ಕೆ. ಅಮರನಾಥ ಶೆಟ್ಟಿ, ರಾಜ್ಯ ಪ್ರ.ಕಾರ್ಯದರ್ಶಿ ಇಕ್ಬಾಲ್ ಅಹ್ಮದ್, ದ.ಕ. ಜಿಲ್ಲಾ ಉಪಾಧ್ಯಕ್ಷ ರಿಯಾಝ್ ಎಚ್ ಕಾರ್ನಾಡ್, ಕಾರ್ಯಾಧ್ಯಕ್ಷ ರಾಮ್ ಗಣೇಶ್, ವಕ್ತಾರ ಸುಶೀಲ್ ನೊರೊನ್ಹ, ಕಾರ್ಯದರ್ಶಿ ರತ್ನಾಕರ ಸುವರ್ಣ, ಜಿಲ್ಲಾ ಯುವ ಘಟಕಾಧ್ಯಕ್ಷ ಅಕ್ಷಿತ್ ಸುವರ್ಣ, ಜೆಡಿಎಸ್ ಮುಲ್ಕಿ ಬ್ಲಾಕ್ ಅಧ್ಯಕ್ಷ ಜೀವನ್ ಕೆ.ಶೆಟ್ಟಿ, ಪ್ರಚಾರ ಸಮಿತಿ ಅಧ್ಯಕ್ಷ ಶಶಿಕಾಂತ್ ಶೆಟ್ಟಿ, ಕಾರ್ಯದರ್ಶಿ ನವೀನ್ ಪುತ್ರನ್, ನಾಯಕರಾದ ನೂರುಲ್ಲಾ ಶೇಕ್, ಅಬ್ದುರ್ರಝಕ್, ಸಲಾಂ, ಕುಮಾರ ಶೆಟ್ಟಿ ಹಾಗು ಕಾರ್ಯಕರ್ತರು ಭಾಗವಹಿಸಿದರು.








