ಕಾಂಗ್ರೆಸ್ ಸೇರಿದ 'ಬಿಗ್ ಬಾಸ್' ವಿನ್ನರ್
ಮುಂಬೈ, ಫೆ.5: ಪ್ರಸಿದ್ಧ ಟೆಲಿವಿಶನ್ ನಟಿ, ಬಿಗ್ ಬಾಸ್ ಸೀಸನ್ 11ರ ವಿಜೇತೆ ಶಿಲ್ಪಾ ಶಿಂಧೆ ಇಂದು ಮುಂಬೈಯಲ್ಲಿ ಕಾಂಗ್ರೆಸ್ ಸೇರಿದರು.
ಪಕ್ಷದ ಮಹಾರಾಷ್ಟ್ರ ಘಟಕದ ಮುಖ್ಯಸ್ಥ ಸಂಜಯ್ ನಿರುಪಮ್ ಶಿಂಧೆಯವರನ್ನು ಪಕ್ಷಕ್ಕೆ ಬರಮಾಡಿಕೊಂಡರು. 1999ರಲ್ಲಿ ಟೆಲಿವಿಶನ್ ಗೆ ಪಾದಾರ್ಪಣೆಗೈದ ಶಿಂಧೆ ಭಾಬಿ ಜಿ ಘರ್ ಪರ್ ಹೇ ಮೂಲಕ ಪ್ರಸಿದ್ಧರಾದರು.
2017ರಲ್ಲಿ ಹಿಂದಿ ಬಿಗ್ ಬಾಸ್ ನಲ್ಲಿ ಸ್ಪರ್ಧಿಸಿದ್ದ ಅವರು, ವಿನ್ನರ್ ಆಗಿ ಹೊರಹೊಮ್ಮಿದರು.
Next Story