ಪರಿಶಿಷ್ಟ ಜಾತಿ ದೇವದಾಸಿಯರ ಮಕ್ಕಳ ಮದುವೆಗೆ ಪ್ರೋತ್ಸಾಹ ಧನ
ಉಡುಪಿ, ಫೆ.5: ಪರಿಶಿಷ್ಟ ಜಾತಿ ದೇವದಾಸಿಯರ ಗಂಡು ಮಕ್ಕಳು ಇತರೆ ಜಾತಿಯ ಹುಡುಗಿಯನ್ನು ವಿವಾಹವಾದಲ್ಲಿ 3 ಲಕ್ಷ ರೂ. ಮತ್ತು ದೇವದಾಸಿ ಯರ ಹೆಣ್ಣುಮಕ್ಕಳು ಇತರೆ ಜಾತಿಯ ಹುಡುಗನನ್ನು ವಿವಾಹವಾದಲ್ಲಿ 5 ಲಕ್ಷ ರೂ. ಪ್ರೋತ್ಸಾಹ ಧನ ನೀಡುವ ಕಾರ್ಯಕ್ರಮವನ್ನು ಸಮಾಜ ಕಲ್ಯಾಣ ಇಲಾಖೆಯಿಂದ ಅನುಷ್ಠಾನಗೊಳಿಸಲಾಗುತಿದ್ದು, ಈ ಸಂಬಂಧ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಷರತ್ತುಗಳು:ಅಭ್ಯರ್ಥಿಗಳು ವಾಸವಿರುವ ಜಿಲ್ಲೆಯಲ್ಲಿ ಅರ್ಜಿ ಸಲ್ಲಿಸಬೇಕು ಹಾಗೂ ಪರಿಶಿಷ್ಟ ಜಾತಿಗೆ ಸೇರಿದವರಾಗಿರಬೇಕು. 18 ತಿಂಗಳ ಒಳಗೆ ವಿವಾಹದ ಬಗ್ಗೆ ಉಪನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿ ಮಾಡಿಕೊಂಡು ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಸಲ್ಲಿಸಬೇಕು. ಗುರುತಿಸಲ್ಪಟ್ಟ ದೇವದಾಸಿಯರ ಮಕ್ಕಳನ್ನು ಗುರುತಿಸಲ್ಪಟ್ಟ ಇನ್ನೊಬ್ಬ ದೇವದಾಸಿಯರ ಮಕ್ಕಳು ಮದುವೆ ಮಾಡಿಕೊಂಡರೆ ಪ್ರೋತ್ಸಾಹ ಧನಕ್ಕೆ ಅರ್ಹರೆನಿಸುವುದಿಲ್ಲ. ದಂಪತಿಗಳ ವಾರ್ಷಿಕ ಆದಾಯ 5 ಲಕ್ಷ ರೂ.ಗಳಿಗೆ ಮೀರಿರಬಾರದು. ಈ ಸೌಲ್ಯವ್ನು ಒಮ್ಮೆ ಮಾತ್ರ ಪಡೆಯಬಹುದು.
ಫಲಾನುಭವಿ ಯುವಕರು ಕನಿಷ್ಟ 21ವರ್ಷದಿಂದ 45 ಹಾಗೂ ಯುವತಿಯರು 18ರಿಂದ 42 ವರ್ಷದೊಳಗಿರಬೇಕು. 2ನೇ ಬಾರಿ ಮದುವೆಯಾಗುವ ದಂಪತಿಗಳು ಈ ಸೌಲಭ್ಯ ಪಡೆಯಲು ಅರ್ಹರಲ್ಲ.
ಇಲಾಖಾ ವೆಬ್‌ಸೈಟ್-www.sw.kar.nic.in - ನಲ್ಲಿ ಅರ್ಜಿಯನ್ನು ಸಲ್ಲಿಸಿ, ಸೂಕ್ತ ದಾಖಲೆಯೊಂದಿಗೆ ಒಂದು ವಾರದೊಳಗೆ ಉಪನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ರಜತಾದ್ರಿ, ಮಣಿಪಾಲ ಉಡುಪಿ, ದೂರವಾಣಿ ಸಂಖ್ಯೆ: 0820-2574892ಗೆ ಸಲ್ಲಿಸಬೇಕು. ಹೆಚ್ಚಿನ ವಿವರಗಳಿಗೆ ಸಮಾಜ ಕಲ್ಯಾಣ ಇಲಾಖೆಯನ್ನು ಸಂಪರ್ಕಿಸುವಂತೆ ಸಮಾಜ ಕಲ್ಯಾಣ ಇಲಾಖೆಯ ಉಪ ನಿದೇಶರ್ಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







