ಜಾನುವಾರು ಕಳವು: ಅಪ್ರಾಪ್ತರು ಸಹಿತ ನಾಲ್ವರ ಸೆರೆ
ಕುಂದಾಪುರ, ಫೆ.5: ಗುಲ್ವಾಡಿ ಗ್ರಾಮದ ಮಾವಿನಕಟ್ಟೆಯ ಎಂ.ಚೆರಿಯಬ್ಬ ಎಂಬವರ ಮನೆಯ ಜಾನುವಾರು ಕಳವು ಪ್ರಕರಣಕ್ಕೆ ಸಂಬಂಧಿಸಿ ಮೂವರು ಅಪ್ರಾಪ್ತರು ಸೇರಿದಂತೆ ನಾಲ್ವರನ್ನು ಕುಂದಾಪುರ ಗ್ರಾಮಾಂತರ ಪೊಲೀಸರು ಇಂದು ಬಂಧಿಸಿದ್ದಾರೆ.
ಚೆರಿಯಬ್ಬ ಸಾಕಿದ ಜಾನುವಾರುಗಳನ್ನು ಮನೆಯ ಹತ್ತಿರದಲ್ಲಿರುವ ಅಡಿಕೆ ತೋಟದಲ್ಲಿ ಫೆ.2ರಂದು ಬೆಳಗ್ಗೆ ಕಟ್ಟಿ ಹಾಕಿದ್ದರು. ಸಂಜೆ ವೇಳೆ ಇದರಲ್ಲಿ 8000 ರೂ. ಮೌಲ್ಯದ ಗಂಡು ಕರು ಕಳವಾಗಿರುವು ತಿಳಿದುಬಂತು. ಈ ಬಗ್ಗೆ ಕುಂದಾ ಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿತ್ತು.
ತನಿಖೆ ನಡೆಸಿದ ಪೊಲೀಸರು ಗಂಗೊಳ್ಳಿಯ ಒಸಾಮ (21) ಹಾಗೂ 17 ವರ್ಷ ಪ್ರಾಯದ ಗುಲ್ವಾಡಿಯ ಇಬ್ಬರು ಹಾಗೂ ಬಸ್ರೂರಿನ ಓರ್ವ ಬಾಲಕ ನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಅಪ್ರಾಪ್ತರನ್ನು ಉಡುಪಿಯ ರಿಮ್ಯಾಂಡ್ ಹೋಮ್‌ಗೆ ದಾಖಲಿಸಲಾಗಿದೆ. ಒಸಾಮನನ್ನು ಇಂದು ಸಂಜೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.
Next Story





