ಸಿಎಫ್‌ಐ ಕರ್ನಾಟಕ ರಾಜ್ಯ ಸಮಿತಿ ಸಭೆ: ರಾಜ್ಯಾಧ್ಯಕ್ಷರಾಗಿ ಫಯಾಝ್ ದೊಡ್ಡಮನೆ ಆಯ್ಕೆ

ಮಂಗಳೂರು, ಫೆ.5: ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಪ್ರತಿನಿಧಿ ಸಭೆಯು ಇತ್ತೀಚೆಗೆ ಮಿತ್ತೂರಿನ ಫ್ರೀಡಂ ಸಭಾಂಗಣದಲ್ಲಿ ನಡೆಯಿತು.
ರಾಜ್ಯಾಧ್ಯಕ್ಷ ಮುಹಮ್ಮದ್ ತಪ್ಸೀರ್ ಧ್ವಜಾರೋಹಣಗೈದರು. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರವೂಫ್ ಶರೀಫ್ ಸಭೆಯನ್ನು ಉದ್ಘಾಟಿಸಿದರು. ಸಭೆಯಲ್ಲಿ ರಾಜ್ಯದ ಶೈಕ್ಷಣಿಕ ಮತ್ತು ರಾಜಕೀಯ ಹಾಗೂ ಸಾಮಾಜಿಕ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಲಾಯಿತು. ರಾಷ್ಟ್ರೀಯ ಉಪಾಧ್ಯಕ್ಷ ರಹೀಂ ಬೆಂಗಳೂರು ಮತ್ತು ಸಮಿತಿ ಸದಸ್ಯೆ ಮಿಸ್ರಿಯಾ ಉಪಸ್ಥಿತರಿದ್ದರು.
ಈ ಸಂದರ್ಭ 2019-20ನೆ ಸಾಲಿನ ನೂತನ ರಾಜ್ಯಾಧ್ಯಕ್ಷರಾಗಿ ಫಯಾಝ್ ದೊಡ್ಡಮನೆ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಸ್ವದಕತ್ ಶಾ, ಉಪಾಧ್ಯಕ್ಷರಾಗಿ ಆರಿಫ್ ಶಿವಮೊಗ್ಗ ಮತ್ತು ಮುರ್ಶಿದಾ ಬಾನು, ಕಾರ್ಯದರ್ಶಿಗಳಾಗಿ ಅಶ್ವಾನ್ ಸಾದಿಕ್ ಮತ್ತು ಅಶ್ರಫ್ ದಾವಣಗೆರೆ, ಕೋಶಾಧಿಕಾರಿಯಾಗಿ ಮುಸ್ವರ್ ಬೆಂಗಳೂರು, ಸಮಿತಿ ಸದಸ್ಯರಾಗಿ ಮಹಮ್ಮದ್ ಶಾಕಿರ್, ಅಥಾವುಲ್ಲಾ ಪೂಂಜಲ್‌ಕಟ್ಟೆ, ಮುಹಮ್ಮದ್ ರಿಯಾಝ್, ಮುಬಾರಕ್ ಬೆಂಗಳೂರು, ಬಾಷಾ ಕೊಪ್ಪಳ, ಅಲ್ತಾಫ್ ಬಳ್ಳಾರಿ, ಇಮ್ರಾನ್ ಪಿ.ಜೆ, ಸರ್ಫಾಜ್ ಗಂಗಾವತಿ, ಮುಹಮ್ಮದ್ ಆಸಿಫ್, ಇಮ್ರಾನ್ ಮಾಗಡಿ, ಸುಹೈಲ್ ಬೆಂಗಳೂರು, ಸಮೀನಾ ಮೈಸೂರು, ಮುಫೀದಾ ರಹ್ಮಾನ್ ಮತ್ತು ಶಾನ್ ಬೇಗಂ ಆಯ್ಕೆಯಾದರು.
ಚುನಾವಣಾ ಪ್ರಕಿಯೆಯನ್ನು ರಾಷ್ಟ್ರೀಯ ಸಮಿತಿ ಸದಸ್ಯ ಮುಸ್ತಫಾ ತುಳುನಾಡು ನಡೆಸಿಕೊಟ್ಟರು. ರಾಜ್ಯ ಸಲಹಾ ಸಮಿತಿಯ ಅಧ್ಯಕ್ಷ ರಿಯಾಝ್ ಪಾಷಾ, ನಿಕಟಪೂರ್ವ ಅಧ್ಯಕ್ಷ ಮುಹಮ್ಮದ್ ತಪ್ಸೀರ್, ರಾಷ್ಟ್ರೀಯ ಕಾರ್ಯದರ್ಶಿ ಕಲೀಮ್ ತುಮಕೂರು ಉಪಸ್ಥಿತರಿದ್ದರು.
ಸಭೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರನ್ನು ನೇಮಿಸಬೇಕು, ಪ್ರಜಾಪ್ರಭುತ್ವ ಮೌಲ್ಯಗಳನ್ನು ಎತ್ತಿ ಹಿಡಿಯುವ ರಾಜಕೀಯ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು, ಅಪಾಯದ ಅಂಚಿನಲ್ಲಿರುವ ಸರಕಾರಿ ಉರ್ದು ಶಾಲೆಗಳನ್ನು ಅಭಿವೃದ್ಧಿಗೊಳಿಸಬೇಕು, ಶುಲ್ಕ ಪಾವತಿಸಿ ಪ್ರತಿಭಟಿಸುವ ನಿಯಮ ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆಯಾಗಿದ್ದು, ಅದನ್ನು ಕೈ ಬಿಡಬೇಕು ಎಂದು ಆಗ್ರಹಿಸಲಾಯಿತಲ್ಲದೆ ಆರ್ಥಿಕವಾಗಿ ಹಿಂದುಳಿದ ಸವರ್ಣೀಯರಿಗೆ ಮೀಸಲಾತಿ ಕ್ರಮವಿ ಅಸಂಧಾನಿಕವಾಗಿದೆ ಎಂದು ನಿರ್ಣಯಿಸಲಾಯಿತು.







