ಮೈಸೂರಿನ ಹಿರಿಯ ಪಾದ್ರಿ ರೆ.ಎನ್.ಎಸ್.ಮೇರಿ ನಿಧನ

ಮೈಸೂರು, ಫೆ.5: ಮೈಸೂರು ಕ್ಯಾಥೋಲಿಕ್ ಡಯೊಸಿಸ್‌ನ ಹಿರಿಯ ಪಾದ್ರಿ ರೆ.ಎನ್.ಎಸ್.ಮೇರಿ ಜೋಸೆಫ್ ಇಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು.
ಬನ್ನಿಮಂಟಪದ ಬಳಿ ಇರುವ ಸೈಂಟ್ ಮೇರೀಸ್ ಮೈನರ್ ಸೆಮಿನರಿಯಲ್ಲಿ ಒಂದು ಗಂಟೆಯ ವೇಳೆ ಪಾದ್ರಿ ರೆ.ಎನ್.ಎಸ್.ಮೇರಿ ಜೋಸೆಫ್ ಅವರಿಗೆ ಅಂತಿಮ ನಮನ ಸಲ್ಲಿಸಲಾಯಿತು. ಫೆ.6ರ ಬುಧವಾರ ಬೆಳಗ್ಗೆ 9 ಗಂಟೆಗೆ ಪಾರ್ಥಿವ ಶರೀರವನ್ನು ಅಶೋಕ ರಸ್ತೆಯಲ್ಲಿರುವ ಸೈಂಟ್ ಜೋಸೆಫ್ ಕ್ಯಾಥೆಡ್ರಾಲ್ಗೆ ಮೆರವಣಿಗೆಯ ಮೂಲಕ ಕೊಂಡೊಯ್ಯಲಾಗುತ್ತಿದ್ದು, 10:30ರ ವೇಳೆಗೆ ಓಲ್ಡ್ ಕೆಸರೆ ಸೈಂಟ್ ಮೈಕೆಲ್ಸ್ ಫಾರ್ಮ್‌ನಲ್ಲಿ ಅಂತಿಮ ವಿಧಿವಿಧಾನ ನೆರವೇರಲಿದೆ ಎಂದು ಮೈಸೂರು ಕ್ಯಾಥೋಲಿಕ್ ಧರ್ಮಪ್ರಾಂತ್ಯ ಧರ್ಮಾಧ್ಯಕ್ಷ ರೆ.ಡಾ.ಕೆ.ಎ.ವಿಲಿಯಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರೆ.ಜೋಸೆಫ್ ಅವರು1967ರ ಎಪ್ರೀಲ್ 13ರಂದು ಪಾದ್ರಿಯಾಗಿ ನೇಮಕಗೊಂಡಿದ್ದು ವಿವಿಧ ರೀತಿಯಲ್ಲಿ ಸೇವೆ ಸಲ್ಲಿಸಿದ್ದರು.
Next Story





