Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಹೆಜಮಾಡಿ ಟೋಲ್ ವಿರುದ್ಧ ಮುಲ್ಕಿ ಬಂದ್...

ಹೆಜಮಾಡಿ ಟೋಲ್ ವಿರುದ್ಧ ಮುಲ್ಕಿ ಬಂದ್ ಹಾಗೂ ಬೃಹತ್ ಪ್ರತಿಭಟನೆ

ವಾರ್ತಾಭಾರತಿವಾರ್ತಾಭಾರತಿ5 Feb 2019 11:24 PM IST
share
ಹೆಜಮಾಡಿ ಟೋಲ್ ವಿರುದ್ಧ ಮುಲ್ಕಿ ಬಂದ್ ಹಾಗೂ ಬೃಹತ್ ಪ್ರತಿಭಟನೆ

ಮುಲ್ಕಿ, ಫೆ. 5: ರಾಷ್ಟ್ರೀಯ ಹೆದ್ದಾರಿ ಹೆಜಮಾಡಿಯಲ್ಲಿ ನವಯುಗ್ ಕಂಪನಿಯಿಂದ ಸ್ಥಾಪಿತವಾಗಿರುಚ ಅಕ್ರಮ ಟೋಲ್‍ನಿಂದ ಮೂಲ್ಕಿ ಆಸುಪಾಸಿನ 5 ಕಿಮೀ ವ್ಯಾಪ್ತಿಯ ನಾಗರಿಕರಿಗೆ ಉಚಿತ ಟೋಲ್ ನೀಡಬೇಕೆಂದು ಆಗ್ರಹಿಸಿ ಮೂಲ್ಕಿ ಬಂದ್ ಹಾಗೂ ಹೆಜಮಾಡಿ ಟೋಲ್ ಬಳಿ ಬೃಹತ್ ಪ್ರತಿಭಟನಾ ನಡೆಯಿತು.

ಬಳಿಕ ಹೆಜಮಡಿಯಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜಾ ಮಾತನಾಡಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನವಯುಗ್ ಕಂಪನಿಯು ಹೆದ್ದಾರಿ ಕಾಮಗಾರಿ ಸರಿಯಾಗಿ ಪೂರ್ತಿಗೊಳಿಸದೆ ತಲಪಾಡಿ, ಎನ್‍ಐಟಿಕೆ, ಹೆಜಮಾಡಿ, ಸಾಸ್ತಾನದಲ್ಲಿ ಅಕ್ರಮವಾಗಿ ಟೋಲ್ ಸ್ಥಾಪಿಸಿ ಈ ಭಗದ ಜನರನ್ನು ಮೂರ್ಖರನ್ನಾಗಿಸಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದಿವಾಳಿಯಂಚಿನಲ್ಲಿರುವ ನವಯುಗ್ ಕಂಪನಿಗೆ ಹೆದ್ದಾರಿ ಕಾಮಗಾರಿ ಗುತ್ತಿಗೆ ನೀಡಿದ್ದೇ ತಪ್ಪು.ಮೊದಲು ರಸ್ತೆಯನ್ನು ಸುಸ್ಥಿತಿಯಲ್ಲಿಡಲಿ.ಸರ್ವಿಸ್ ರಸ್ತೆಗಳನ್ನು ನಿರ್ಮಿಸಲಿ.ಬಳಿಕ ಟೋಲ್ ಸಂಗ್ರಹಕ್ಕೆ ಮುಂದಾಗಿ ಎಂದರು.ಟೋಲ್ ಪ್ಲಾಝಾ ಸುತ್ತಲಿನ 10 ಕಿಮೀ ವ್ಯಾಪ್ಯಿಯ ವಾಹನ ಬಳಕೆದಾರರಿಗೆ ಟೋಲ್ ವಿನಾಯಿತಿ ನೀಡಬೇಕೆಂಬ ನಿಯಮವಿದೆ.ಅದು ನಮ್ಮ ಹಕ್ಕು.ಅದಕ್ಕಾಗಿ ಯಾವುದೇ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದ ಅವರು ಟೋಲ್ ವ್ಯಾಪ್ತಿಯ ವಾಹನ ಬಳಕೆದಾರರು ಇಂದಿನಿಂದಲೇ ಟೋಲ್ ನೀಡಬೇಡಿ ಎಂದರು.

ಮುಲ್ಕಿ-ಮೂಡಬಿದಿರೆ ಶಾಸಕ ಉಮಾನಾಥ್ ಕೋಟ್ಯಾನ್ ಮಾತನಾಡಿ, ಸ್ಥಳೀಯ ವಾಹನಗಳಿಗೆ ಟೋಲ್ ವಿನಾಯಿತಿ ನೀಡಲೇಬೇಕು.ಈ ಬಗ್ಗೆ ವಿಧಾನಸಭೆ ಯಲ್ಲಿ ವಿಷಯ ಪ್ರಸ್ತಾಪ ಮಾಡಲಿದ್ದೇನೆ. ಇಲ್ಲಿನ ಟೋಲ್ ವಿರೋಧಿ ಹೋರಾಟಕ್ಕೆ ತನ್ನ ಸಂಪೂರ್ಣ ಬೆಂಬಲವಿದೆ ಎಂದರು.

ಮಾಜಿ ಶಚಿವ ಕೆ.ಅಭಯಚಂದ್ರ ಜೈನ್ ಮಾತನಾಡಿ,ಒಗ್ಗಟ್ಟು ನಮ್ಮ ಮಂತ್ರವಾಗಬೇಕು.ಉಡುಪಿ ಜಿಲ್ಲಾಧಿಕಾರಿ ಮತ್ತು ನವಯುಗ್ ಕಂಪನಿ ನಮ್ಮ ಬೇಡಿಕೆಗೆ ಶೀಘ್ರ ಸ್ಪಂದಿಸಬೇಕು.ಶಾಂತಿಪ್ರಿಯ ಕರಾವಳಿಗರನ್ನು ದುರುಪಯೋಗಪಡಿಸದಿರಿ ಎಂದರು.

ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ,ಟೋಲ್ ವಿನಾಯಿತಿಗೆ ಆಗ್ರಹಿಸಿ ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಶೀಘ್ರ ಕೇಂದ್ರ ಸಚಿವ ನಿತಿನ್ ಗಡ್ಕರಿಯನ್ನು ಭೇಟಿಯಾಗೋಣ ಎಂದರು.

ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ ಮಾತನಾಡಿ,ಇದು ಬಲವಂತದ ಬಂದ್ ಅಲ್ಲ.ನಮ್ಮ ಹಕ್ಕಿಗಾಗಿ ಸ್ವಯಂಸ್ಪೂರ್ತಿಯಿಂದ ನಡೆಸುತ್ತಿರುವ ಹೋರಾಟ.ನವಯುಗ್ ಹಠಕ್ಕೆ ಬಿದ್ದರೆ ನಮ್ಮದೂ ಹಠವಿದೆ.ಸಾಂಕೇತಿಕ ಪ್ರತಿಭಟನೆಗೆ ಮಣಿದು ಶೀಘ್ರ ವಿನಾಯಿತಿ ನೀಡಬೇಕು.ಇಲ್ಲದಿದ್ದರೆ ಉಗ್ರ ಹೋರಾಟಕ್ಕೂ ಸಿದ್ಧರಿದ್ದೇವೆ ಎಂದರು.

ರಾಜ್ಯ ಕಸಾಪ ಪೂರ್ವಾಧ್ಯಕ್ಷ ಹರಿಕೃಷ್ಣ ಪುನರೂರು ಮಾತನಾಡಿ,ಹೋರಾಟದಿಂದ ಮಾತ್ರ ನಮ್ಮ ಬೇಡಿಕೆ ಈಡೇರಿಸಿಕೊಳ್ಳಬಹುದು ಎಂದರು.
ದಕ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಮಾತನಾಡಿ ಸಂಘಟಿತ ಹೋರಾಟದಿಂದ ಜಯ ಖಚಿತ. ಬೇಡಿಕೆ ಈಡೇರಿಸುವವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ ಎಂದರು.ಮೂಲ್ಕಿ ವ್ಯಾಪ್ತಿಯ 5 ಕಿಮೀ ಸುತ್ತಲಿನ ವಾಹನ ಬಳಕೆದಾರರಿಗೆ ಟೋಲ್ ವಿನಾಯಿತಿಗೆ ಆಗ್ರಹಿಸಿ ಮೂಲ್ಕಿ ವಿಶೇಷ ತಹಶಿಲ್ದಾರ್ ಮಾಣಿಕ್ಯ,ಕಾಪು ತಹಶೀಲ್ದಾರ್ ಪ್ರದೀಪ್ ಕುಡೇಕರ್,ನವಯುಗ್ ಟೋಲ್ ಮ್ಯಾನೇಜರ್ ಶಿವಪ್ರಸಾದ್ ರೈಯವರಿಗೆ ಮನವಿ ಅರ್ಪಿಸಲಾಯಿತು.ಈ ಸಂದರ್ಭ ಪ್ರತಿಕ್ರಿಯಿಸಿದ ಶಿವಪ್ರಸಾದ ರೈ.ಇಂದಿನ ಹೋರಾಟದ ವೀಡಿಯೋ ಚಿತ್ರೀಕರಣವನ್ನು ಕಂಪನಿ ಮುಖ್ಯಸ್ಥರಿಗೆ ಈಗಾಗಲೇ ತಲುಪಿಸಿದ್ದೇವೆ.ಅವರು ಈ ಬಗ್ಗೆ ಸಮಾಲೋಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.

ಮುಲ್ಕಿಯಲ್ಲಿ ಬಂದ್ ಬೃಹತ್ ಪ್ರತಿಭಟನಾ ಜಾಥಾ

ಮುಲ್ಕಿಯಲ್ಲಿ ಬೆಳಗ್ಗಿನಿಂದಲೇ ಮುಲ್ಕಿ ಅಬಿವೃದ್ದಿ ನಾಗರಿಕ ಸಮಿತಿಯ ಅದ್ಯಕ್ಷರಾದ ಹರೀಶ್ ಪುತ್ರನ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಯಿತು. ಮುಲ್ಕಿ ಕಾರ್ನಾಡು,ಕೆಎಸ್ ರಾವ್ ನಗರದಲ್ಲಿ ಅಂಗಡಿಗಳನ್ನು ಬಂದ್ ಮಾಡಲಾಗಿತ್ತು. ರಾಷ್ಟ್ರೀಯ ಹೆದ್ದಾರಿ ಮೂಲಕ ಉಡುಪಿ ಜಿಲ್ಲೆಯಲ್ಲಿರುವ (1.5 ಕಿಮೀ ದೂರ) ಹೆಜಮಾಡಿ ಟೋಲ್ ಪ್ಲಾಝಾವರೆಗೆ ನಡೆದುಕೊಂಡು ಬೃಹತ್ ಪ್ರತಿಭಟನೆ ಮೂಲಕ ಸಾಗಿಬರಲಾಯಿತು.

ಸಭೆಯಲ್ಲಿ ದಿನೇಶ್ ಹೆಗ್ಡೆ ಉಳೆಪಾಡಿ,ಬಪ್ಪನಾಡು ದೇವಳದ ಪ್ರಧಾನ ಅರ್ಚಕ ಶ್ರೀಪತಿ ಉಪಾಧ್ಯಾಯ,ಚರ್ಚ್ ಧರ್ಮಗುರುಗಳಾದ ಫಾ.ಎಡ್ವರ್ಡ್ ಕರ್ಕಡ ಮತ್ತು ಫಾ.ಸಿಲ್ವೆಸ್ಟರ್ ಡಿಕೋಸ್ಟಾ,ಮೂಲ್ಕಿ ಕೇಂಂದ್ರ ಮಸೀದಿಯ ಖತೀಬರಾದ ಎಸ್‍ಪಿ ಮೊಹಮ್ಮದ್ ದಾರಿಮಿ,ಅವಿಭಜಿತ ದಕ ಜಿಲ್ಲಾ ಟೋಲ್ ವಿರೋಧಿ ಹೋರಾಟ ಸಮಿತಿಯ ಅಧ್ಯಕ್ಷ ಡಾ.ದೇವಿಪ್ರಸಾದ್ ಶೆಟ್ಟಿ,ಮೂಲ್ಕಿ ಅಭಿವೃದ್ಧಿ ಹೋರಾಟ ಸಮಿತಿಯ ಅಧ್ಯಕ್ಷ ಹರೀಶ್ ಎನ್.ಪುತ್ರನ್,ಉಪಾಧ್ಯಕ್ಷ ಸುನಿಲ್ ಆಳ್ವ,ಧನಂಜಯ ಕೋಟ್ಯಾನ್ ಮಟ್ಟು,ಭಾಸ್ಕರ ಹೆಗ್ಡೆ ಮತ್ತಿತರರು ಮಾತನಾಡಿದರು.

ಎನ್‍ಎಸ್ ಮನೋಹರ ಶೆಟ್ಟಿ.ಎಮ್.ನಾರಾಯಣ ಶೆಟ್ಟಿ,ಗೌತಮ್ ಜೈನ್,ಮಧು ಆಚಾರ್ಯ, ಮುನೀರ್ ಕಾರ್ನಾಡ್, ವೆಂಕಟೇಶ್ ಹೆಬ್ಬಾರ್, ಶೇಖರ್ ಹೆಜ್ಮಾಡಿ, ಗುಲಾಂ ಮೊಹಮ್ಮದ್, ನವೀನ್‍ಚಂದ್ರ ಜೆ.ಶೆಟ್ಟಿ, ಸುಶೀಲ್ ನೊರೋನ್ಹಾ, ರತ್ನಾಕರ ಸುವರ್ಣ, ಇಕ್ಬಾಲ್ ಅಹಮದ್, ಡಾ.ಹರಿಶ್ಚಂದ್ರ ಪಿ.ಸಾಲ್ಯಾನ್, ಅಬ್ದುಲ್ ರಜಾಕ್, ಶಾಲೆಟ್ ಪಿಂಟೋ, ವಸಂತ್ ಬೆರ್ನಾರ್ಡ್, ಪುತ್ತುಬಾವ, ಬಿಎಮ್ ಆಸಿಫ್, ದೇವಪ್ರಸಾದ್ ಪುನರೂರು, ಗೋಪಿನಾಥ ಪಡಂಗ, ಸತೀಶ್ ಅಂಚನ್, ಉದಯ ಶೆಟ್ಟಿ ಆದಿಧನ್, ಉದಯ ಅಮೀನ್, ಸಾಧು ಅಂಚನ್, ರಿಯಾಝ್ ಕಾರ್ನಾಡು, ಶಶಿಕಾಂತ್ ಶೆಟ್ಟಿ, ದೇವಣ್ಣ ನಾಯಕ್, ವಿನೋದ್ ಸಾಲ್ಯಾನ್, ರಂಗನಾಥ ಶೆಟ್ಟಿ, ಶೈಲೇಶ್ ಕುಮಾರ್, ಬಶೀರ್ ಕುಳಾಯಿ, ಅಕ್ಷಿತ್ ಸುವರ್ಣ, ರಾಮ್‍ ಗಣೇಶ್, ಡಾ.ಎಮ್‍ಎ ಕುಡ್ವ, ಪುರುಷೋತ್ತಮ ರಾವ್, ಪ್ರಮೋದ್ ಸುವರ್ಣ, ಎಮ್.ನಾರಾಯಣ, ಸದಾಶಿವ ಹೊಸದುರ್ಗ, ಪ್ರಬೋದ್ ಕುಡ್ವ, ರವೀಂದ್ರ ಶೆಟ್ಟಿ, ಗೌತಮ್ ಜೈನ್, ವೀರಯ್ಯ ಹಿರೇಮಠ, ಅರ್ಜುನ್ ಹಿರೇಮಠ, ಮಂಜುನಥ ಆರ್‍ಕೆ, ವಿಠಲ್‍ಎನ್‍ಎಂ ಮತ್ತಿತರರು ಉಪಸ್ಥಿತರಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X