ಪ್ರಯಾಸದ ಜಯ ದಾಖಲಿಸಿದ ಸೋಂಗ
ಸಡ್ ಡಿ ಫ್ರಾನ್ಸ್ ಟೆನಿಸ್ ಟೂರ್ನಿ
ಮೊಂಟ್‌ಪೆಲ್ಲಿಯರ್(ಫ್ರಾನ್ಸ್), ಫೆ.5: ಸುದೀರ್ಘ ಹೋರಾಟ ಕಂಡುಬಂದ ಮೊದಲ ಸುತ್ತಿನ ಸಿಂಗಲ್ಸ್ ಪಂದ್ಯದಲ್ಲಿ ಫ್ರೆಂಚ್ ಆಟಗಾರ ಯುಗೊ ಹಂಬರ್ಟ್ ಅವರನ್ನು 3-6, 7-6(5), 6-4 ರಿಂದ ಸೋಲಿಸಿದ ಫ್ರಾನ್ಸ್ ನ ಜೋ ವಿಲ್ಫ್ರೆಡ್ ಸೋಂಗ ಅವರು ಸಡ್ ಡಿ ಫ್ರಾನ್ಸ್ ಟೆನಿಸ್ ಟೂರ್ನಿಯ ದ್ವಿತೀಯ ಸುತ್ತಿಗೆ ಕಾಲಿಟ್ಟಿದ್ದಾರೆ.
ಗಾಯದ ಕಾರಣ ದೀರ್ಘ ಅವಧಿಗೆ ಪಂದ್ಯಗಳಿಂದ ದೂರ ಉಳಿದಿದ್ದ ಸೋಂಗ ಸದ್ಯ ವಿಶ್ವ ರ್ಯಾಂಕಿಂಗ್‌ನಲ್ಲಿ 210ನೇ ಸ್ಥಾನದಲ್ಲಿದ್ದಾರೆ. ಮುಂದಿನ ಪಂದ್ಯದಲ್ಲಿ ಅವರು, ಮತ್ತೊಬ್ಬ ತನ್ನದೇ ದೇಶದ ನಾಲ್ಕನೇ ಶ್ರೇಯಾಂಕದ ಗಿಲ್ಲೆಸ್ ಸಿಮೊನ್‌ರನ್ನು ಮುಖಾಮುಖಿಯಾಗಲಿದ್ದಾರೆ. ಸಿಮೊನ್ ಪ್ರಥಮ ಸುತ್ತಿನಲ್ಲಿ ಬೈ ಪಡೆದಿದ್ದಾರೆ.
ಏಳು ಬ್ರೇಕ್ ಪಾಯಿಂಟ್‌ಗಳನ್ನು ವ್ಯರ್ಥ ಮಾಡಿದ ಸೋಂಗ ಫೈನಲ್ ಸೆಟ್‌ನಲ್ಲಿ ಪಂದ್ಯಕ್ಕೆ ಕಳೆ ತಂದುಕೊಂಡರು. ತೀವ್ರ ಹೋರಾಟದ ನಡುವೆಯೂ ಎರಡನೇ ಸೆಟ್ ಕಳೆದುಕೊಂಡಿದ್ದಕ್ಕೆ ಎದುರಾಳಿ ಆಟಗಾರ ಹಂಬರ್ಟ್ ಹತಾಶರಾಗಿದ್ದು ಸೋಂಗಗೆ ಅನುಕೂಲವಾಯಿತು.
Next Story





