ಜಮ್ಮು-ಕಾಶ್ಮೀರದಲ್ಲಿ ಭೂಕಂಪ

ಶ್ರೀನಗರ,ಫೆ.5: ಜಮ್ಮು-ಕಾಶ್ಮೀರದಲ್ಲಿ ಮಂಗಳವಾರ ರಾತ್ರಿ ಭೂಕಂಪ ಸಂಭವಿಸಿದ್ದು, ತೀವ್ರತೆ ರಿಕ್ಟರ್ ಮಾಪಕದಲ್ಲಿ 5.6ರಷ್ಟಿತ್ತು.
ಶ್ರೀನಗರ ಮತ್ತು ಕಾಶ್ಮೀರ ಕಣಿವೆಯ ಹೆಚ್ಚಿನ ಭಾಗಗಳಲ್ಲಿ ರಾತ್ರಿ 10:37ಕ್ಕೆ ಭೂಮಿ ನಡುಗಿದ್ದು, ಭೀತಿಗೊಳಗಾದ ಜನರು ಮನೆಗಳಿಂದ ಹೊರಗೋಡಿದ್ದರು.
ಭೂಕಂಪದ ಕೇಂದ್ರಬಿಂದು ಶ್ರೀನಗರದಿಂದ 118 ಕಿ.ಮೀ.ದೂರ ವಾಯುವ್ಯ ಕಾಶ್ಮೀರದಲ್ಲಿ 40 ಕಿ.ಮೀ.ಆಳದಲ್ಲಿತ್ತು ಎಂದು ವರದಿಗಳು ತಿಳಿಸಿವೆ. ಭೂಕಂಪದಿಂದ ಯಾವುದೇ ಸಾವುನೋವು ಅಥವಾ ಆಸ್ತಿಹಾನಿ ಈವರೆಗೂ ವರದಿಯಾಗಿಲ್ಲ.
Next Story





