ಹಿ.ಪ್ರ: ಸೇನಾ ವಸತಿಗೃಹದಲ್ಲಿ ಅಗ್ನಿ ಆಕಸ್ಮಿಕ
ಸಾಂದರ್ಭಿಕ ಚಿತ್ರ
ಶಿಮ್ಲಾ,ಫೆ.6: ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ಧರ್ಮಶಾಲಾ ಸಮೀಪದ ಯೋಲ್ ದಂಡುಪ್ರದೇಶದಲ್ಲಿರುವ ಸೇನೆಯ ವಸತಿಗೃಹವೊಂದರಲ್ಲಿ ಬುಧವಾರ ಬೆಂಕಿ ಆಕಸ್ಮಿಕ ಸಂಭವಿಸಿದ್ದು, ಯಾರಿಗೂ ಗಾಯಗಳಾಗಿಲ್ಲ. ಆದರೆ ಪೀಠೋಪಕರಣಗಳು ಭಸ್ಮಗೊಂಡಿವೆ.
ವಿಜಯ ಕುಮಾರ್ ಎನ್ನುವವರ ನಿವಾಸದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು,ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಯಂತ್ರಗಳು ಕೆಲವೇ ನಿಮಿಷಗಳಲ್ಲಿ ಬೆಂಕಿಯನ್ನು ನಂದಿಸಿವೆ. ಘಟನೆಯ ಸಂದರ್ಭ ವಿಜಯ ಕುಮಾರ ಕುಟುಂಬದವರು ಸಮೀಪದ ಪಾಲಂಪುರ ಪಟ್ಟಣಕ್ಕೆ ತೆರಳಿದ್ದರಿಂದ ಮನೆಯಲ್ಲಿ ಯಾರೂ ಇರಲಿಲ್ಲ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಬೆಂಕಿಗೆ ಕಾರಣವಾಗಿರುವಂತೆ ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಅಧಿಕಾರಿಯೋರ್ವರು ತಿಳಿಸಿದರು.
Next Story