ಬಾಂದ್ರಾ-ಮಂಗಳೂರು ಜಂಕ್ಷನ್ ನಡುವೆ ರಜಾದಿನದ ವಿಶೇಷ ರೈಲು
ಉಡುಪಿ, ಫೆ.6: ರಜಾದಿನಗಳ ಪ್ರಯಾಣಿಕರ ನೂಕುನುಗ್ಗಲನ್ನು ತಪ್ಪಿಸಲು ಕೊಂಕಣ ರೈಲ್ವೆ ಪಶ್ಚಿಮ ರೈಲ್ವೆಯ ಸಹಯೋಗದೊಂದಿಗೆ ರಜಾದಿನದ ವಿಶೇಷ ರೈಲನ್ನು, ವಿಶೇಷ ದರದೊಂದಿಗೆ ಬಾಂದ್ರಾ ಹಾಗೂ ಮಂಗಳೂರು ಜಂಕ್ಷನ್ ನಡುವೆ ಓಡಿಸಲು ನಿರ್ಧರಿಸಿದೆ.
ರೈಲು ನಂ.09009-09010 ಬಾಂದ್ರಾ (ಟಿ)-ಮಂಗಳೂರು ಜಂಕ್ಷನ್- ಬಾಂದ್ರಾ (ಟಿ) ಸಾಪ್ತಾಹಿಕ ವಿಶೇಷ ರೈಲು, ವಿಶೇಷ ಟಿಕೇಟ್ ದರದಲ್ಲಿ ವಾರ ಕ್ಕೊಮ್ಮೆ ಸಂಚರಿಸಲಿದೆ.
ರೈಲು ನಂ.09009-09010 ಬಾಂದ್ರಾ (ಟಿ)-ಮಂಗಳೂರು ಜಂಕ್ಷನ್- ಬಾಂದ್ರಾ (ಟಿ) ಸಾಪ್ತಾಹಿಕ ವಿಶೇಷ ರೈಲು, ವಿಶೇಷ ಟಿಕೇಟ್ ದರದಲ್ಲಿ ವಾರ ಕ್ಕೊಮ್ಮೆ ಸಂಚರಿಸಲಿದೆ. ರೈಲು ನಂ.09009 ಈ ರೈಲು ಫೆ.7ಗುರುವಾರದಂದು ರಾತ್ರಿ 11:45ಕ್ಕೆ ಬಾಂದ್ರಾ ನಿಲ್ದಾಣದಿಂದ ಹೊರಟು ಮರುದಿನ ಸಂಜೆ 7:30ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ. ರೈಲು ನಂ.09010 ಮಂಗಳೂರು ಜಂಕ್ಷನ್‌ನಿಂದ ಫೆ.8ರ ಶುಕ್ರವಾರ ರಾತ್ರಿ 11:00ಕ್ಕೆ ಹೊರಟು ಮರುದಿನ ಸಂಜೆ 7:30ಕ್ಕೆ ಬಾಂದ್ರಾ ನಿಲ್ದಾಣ ತಲುಪಲಿದೆ.
ಈ ರೈಲಿಗೆ ಬೊರಿವಿಲಿ, ವಸಾ ರೋಡ್, ಪನ್ವೇಲ್, ರೋಹಾ, ಖೇದ್, ಚಿಪ್ಲುನ್, ಸಂಗಮೇಶ್ವರ ರೋಡ್, ರತ್ನಗಿರಿ, ಕನಕವಲಿ, ಕುಡಾಲ್, ಸಾವಂತವಾಡಿ ರೋಡ್, ತೀವಿಂ, ಮಡಂಗಾವ್ ಜಂಕ್ಷನ್, ಕಾರವಾರ, ಕುಮಟ, ಭಟ್ಕಳ, ಮೂಕಾಂಬಿಕಾ ರೋಡ್ ಬೈಂದೂರು, ಕುಂದಾಪುರ, ಉಡುಪಿ, ಮುಲ್ಕಿ, ಸುರತ್ಕಲ್‌ಗಳಲ್ಲಿ ನಿಲುಗಡೆ ಇರುತ್ತದೆ.
ರೈಲು 22 ಎಲ್‌ಎಚ್‌ಬಿ ಕೋಚ್, 2ಟಯರ್ ಎಸಿ-ಒಂದು ಕೋಚ್, 3ಟಯರ್ ಎಸಿ-4 ಕೋಚ್, ಸ್ಲೀಪರ್- 13 ಕೋಚ್, ಜನರಲ್-2 ಕೋಚ್‌ಗಳನ್ನು ಒಳಗೊಂಡಿರುತ್ತದೆ ಎಂದು ಕೊಂಕಣ ರೈಲ್ವೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.







