ಲಯನ್ಸ್ ಜಿಲ್ಲೆಯಿಂದ 3 ಕೋಟಿ ರೂ. ವೆಚ್ಚದ ಸೇವಾ ಕಾರ್ಯಕ್ರಮ
ಉಡುಪಿ, ಫೆ.6: ಲಯನ್ಸ್ ಜಿಲ್ಲೆ 317 ಸಿ ವತಿಯಿಂದ ಈ ಅವಧಿಯಲ್ಲಿ ಸುಮಾರು ಮೂರು ಕೋಟಿ ರೂ. ವೆಚ್ಚದ ವಿವಿಧ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಲಯನ್ಸ್ ಜಿಲ್ಲಾ ಗವರ್ನರ್ ತಲ್ಲೂರು ಶಿವ ರಾಮ್ ಶೆಟ್ಟಿ ತಿಳಿಸಿದ್ದಾರೆ.
ಉಡುಪಿ ಲಯನ್ಸ್ ಕ್ಲಬ್‌ಗೆ ಅಧಿಕೃತ ಭೇಟಿಯ ಹಿನ್ನೆಲೆಯಲ್ಲಿ ಬುಧವಾರ ಅಲೆವೂರಿನಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವರ್ಷ ಲಯನ್ಸ್ ಜಿಲ್ಲಾ ವ್ಯಾಪ್ತಿಯಲ್ಲಿ ಒಟ್ಟು 40 ಕಾರ್ಯಕ್ರಮಗಳನ್ನು ಆಯೋ ಜಿಸಲಾಗಿದೆ. ಜಿಲ್ಲೆಯಲ್ಲಿ 3000 ಸದಸ್ಯರು ಹಾಗೂ 100 ಕ್ಲಬ್ ಸ್ಥಾಪಿಸುವ ಗುರಿಯನ್ನು ಹೊಂದಲಾಗಿದೆ ಎಂದರು.
ಅಂತಾರಾಷ್ಟ್ರೀಯ ಲಯನ್ಸ್ ಕ್ಲಬ್‌ನಿಂದ ಜಿಲ್ಲೆ 317ಸಿಗೆ 1.65ಲಕ್ಷ ಡಾಲರ್ ಅನುದಾನ ಬಿಡುಗಡೆಯಾಗಿದೆ. ಅದೇ ರೀತಿ ಉಡುಪಿ ಜಿಲ್ಲೆಯ ನೆರೆ ಸಂತ್ರಸ್ತರಿ ಗಾಗಿ 10ಸಾವಿರ ಡಾಲರ್ ಒದಗಿಸಲಾಗಿದ್ದು, ಇದರಿಂದ 750 ಕುಟುಂಬ ಗಳಿಗೆ ಪರಿಹಾರ ಸಾಮಾಗ್ರಿಗಳನ್ನು ವಿತರಿಸಲಾಗಿದೆ ಎಂದು ಅವರು ಹೇಳಿದರು.
ಎಲ್ಲ ಲಯನ್ಸ್ ಕ್ಲಬ್‌ಗಳಿಗೆ ವಿಶೇಷ ಗುರುತಿನ ಚೀಟಿಗಳನ್ನು ನೀಡಲಾಗಿದ್ದು, ಇದನ್ನು ವಿಮಾನ ನಿಲ್ದಾಣ ಹಾಗೂ ಇತರ ಕಡೆಗಳಲ್ಲಿ ಬಳಸಬಹುದಾಗಿದೆ. ನಿಷ್ಕ್ರೀಯವಾಗಿರುವ ಕ್ಲಬ್‌ಗಳನ್ನು ಉತ್ತೇಜನಗೊಳಿಸುವ ಕಾರ್ಯ ನಡೆಸಲಾಗು ತ್ತಿದೆ. ಪರಿಸರ ರಕ್ಷಣೆಗಾಗಿ 1.16ಲಕ್ಷ ಗಿಡಗಳನ್ನು ವಿತರಿಸಲಾಗಿದೆ. ಹಸಿವು ನಿವಾರಣೆಗಾಗಿ ವಿವಿಧ ಕ್ಷೇತ್ರಗಳಲ್ಲಿ ಅನ್ನದಾನ ಮಾಡಲಾಗುತ್ತಿದೆ ಎಂದರು.
ಉಡುಪಿ ಲಯನ್ಸ್ ಕ್ಲಬ್ ಕಾರ್ಯದರ್ಶಿ ರವಿರಾಜ್ ನಾಯಕ್ ಮಾತ ನಾಡಿ, ಗವರ್ನರ್ ಅಧಿಕೃತ ಭೇಟಿಯ ಹಿನ್ನೆಯಲ್ಲಿ ಉಡುಪಿ ಕ್ಲಬ್ ವ್ಯಾಪ್ತಿಯಲ್ಲಿ ಒಟ್ಟು 10 ಲಕ್ಷ ರೂ. ಮೊತ್ತದ ಕಾರ್ಯಕ್ರಮ ಸೇರಿದಂತೆ ಕ್ಲಬ್‌ನ ಒಂದು ವರ್ಷ ಅವಧಿಯಲ್ಲಿ ಒಟ್ಟು 32ಲಕ್ಷ ರೂ. ಮೊತ್ತದ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಉಡುಪಿ ಲಯನ್ಸ್ ಕ್ಲಬ್ ಅಧ್ಯಕ್ಷ ಮನೋಜ್ ಪ್ರಭು, ಜಿಲ್ಲಾ ಎರಡನೆ ಉಪಗವರ್ನರ್ ಎಂ.ಎನ್.ಹೆಗ್ಡೆ, ಜಿಲ್ಲಾ ಸಂಪುಟ ಕಾರ್ಯ ದರ್ಶಿ ಎಸ್.ಟಿ.ಕರ್ಕೇರ, ಪದಾಧಿಕಾರಿಗಳಾದ ರಂಜನ್ ಕೆ., ಶಶಿಕುಮಾರ್ ಶೆಟ್ಟಿ, ಡಾ.ಮನೋರಂಜನ್‌ದಾಸ್ ಹೆಗ್ಡೆ, ಡಾ.ರವೀಂದ್ರನಾಥ್ ಶೆಟ್ಟಿ ಮೊದ ಲಾದವರು ಉಪಸ್ಥಿತರಿದ್ದರು.







