ಮತ್ಸ ಜೋಪಾಸನೆ ಯೋಜನೆಗೆ ಚಾಲನೆ: ರಾಜ್ಯಪಾಲ

ಬೆಂಗಳೂರು, ಫೆ.6: ರಾಜ್ಯದಲ್ಲಿನ ಒಟ್ಟು ಮೀನು ಉತ್ಪಾದನೆಯು ಅಂದಾಜು 6 ಲಕ್ಷ ಟನ್‌ಗಳಷ್ಟಿದೆ. ಮೀನುಗಾರಿಕೆ ವಲಯದಲ್ಲಿ ಉದ್ಯೋಗ ಸೃಜಿಸುವುದಕ್ಕೆ ಮತ್ತು ವರಮಾನವನ್ನು ಹೆಚ್ಚಿಸುವುದಕ್ಕೆ ಅಗಾಧ ಅವಕಾಶವಿದೆ ಎಂದು ರಾಜ್ಯಪಾಲ ವಜುಭಾಯಿ ವಾಲಾ ತಿಳಿಸಿದರು.
ಬುಧವಾರ ವಿಧಾನಸೌಧದಲ್ಲಿನ ವಿಧಾನಸಭೆ ಸಭಾಂಗಣದಲ್ಲಿ ಉಭಯ ಸದನಗಳ ಸದಸ್ಯರ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಿದ ಅವರು, ರಾಜ್ಯದಲ್ಲಿ ಮೀನುಗಾರಿಕೆ ಅಭಿವೃದ್ಧಿಯನ್ನು ಮತ್ತಷ್ಟು ಹೆಚ್ಚಿಸಲು ಸೂಕ್ತ ನೀತಿಗಳು ಮತ್ತು ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಕ್ಕೆ ತರಲಾಗುತ್ತಿದೆ ಎಂದರು.
ಮೀನು ಕೆಡದಂತೆ ಸಂರಕ್ಷಿಸಿಡಲು ‘ಮತ್ಸ ಜೋಪಾಸನೆ ಯೋಜನೆ’ಯ ಅಡಿಯಲ್ಲಿ 10 ಶೀತಲೀಕರಣ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ರಾಜ್ಯಪಾಲ ಹೇಳಿದರು.
Next Story





