ಅಂಗಡಿಗೆ ನುಗ್ಗಿ ದಾಂಧಲೆ ಆರೋಪ: ಪೊಲೀಸರಿಗೆ ದೂರು
ಮಂಗಳೂರು, ಫೆ.6: ನಗರದ ಉರ್ವ ಸಮೀಪದ ಚಿಲಿಂಬಿಯಲ್ಲಿರುವ ಲಕ್ಷ್ಮೀ ಟವರ್ ಕಟ್ಟಡದಲ್ಲಿರುವ ಅಂಗಡಿಯಿಂದ ಬೆಲೆ ಬಾಳುವ ವಸ್ತುಗಳು, ದಾಖಲೆ ಪತ್ರ ಹಾಗೂ ಪೀಠೋಪಕರಣಗಳನ್ನು ಹೊರಗೆಸೆದು ಧ್ವಂಸ ಮಾಡಿದ್ದಾರೆ ಎಂದು ಆರೋಪಿಸಿ ಸುಪ್ರೀತ್ ಕುಮಾರ್ ಎಂಬವರು ಉರ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ತಹಶೀಲ್ದಾರರ ಕಚೇರಿಯ ಗ್ರಾಮಕರಣಿಕ ಧರ್ಮ ಸಾಮ್ರಾಟ್, ಉರ್ವ ಪೋಲಿಸ್ ಠಾಣೆ ಸಿಬ್ಬಂದಿ, ನೆರೆಯ ಕೋಣೆಯಲ್ಲಿ ವಾಸ ಮಾಡುವ ಪುರುಷೋತ್ತಮ ಅಂಬು ಚೆಟ್ಟಿಯಾರ್ ಹಾಗೂ ದಿನೇಶ್ ರೈ ಅಂಗಡಿಗೆ ಬುಧವಾರ ಅಕ್ರಮವಾಗಿ ಪ್ರವೇಶಿಸಿ ಯಾವುದೇ ನೊಟೀಸ್ ಜಾರಿ ಮಾಡದೆ ಏಕಾಏಕಿ ಸೊತ್ತುಗಳನ್ನು ಮಾರ್ಗಕ್ಕೆ ಎಸೆದಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಪೊಲೀಸ್ ಆಯುಕ್ತರಿಗೂ ದೂರು ನೀಡಲಾಗಿದೆ ಎಂದು ತಿಳಿದು ಬಂದಿದೆ.
Next Story





